ಕುಂಬಳೆಯ ಹೊಳೆಗಳಲ್ಲಿ ಅಕ್ರಮ ಮರಳು ದಂಧೆಗೆ ಬ್ರೇಕ್; ಜೆಸಿಬಿಯಿಂದ ಕಡವು, ಎರಡು ದೋಣಿಗಳು ಧ್ವಂಸ!

ಕುಂಬಳೆ : ಇಲ್ಲಿಗೆ ಸಮೀಪದ ವಿವಿಧ ಹೊಳೆಗಳಲ್ಲಿ ಅನಧಿಕೃತವಾಗಿ ಹೊಯ್ಮೆ ಸಂಗ್ರಹಿಸಿ ಸಾಗಣೆ ಮಾಡುತ್ತಿದ್ದ ದಂಧೆ ಮತ್ತೆ ತೀವ್ರಗೊಂಡಿದೆ. ಇದರ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಪೊಲೀಸರು, ಪಾಚಾಣಿ ಸಮೀಪ ಕಾರ್ಯಾಚರಿಸುತ್ತಿದ್ದ ಅನಧಿಕೃತ ಕಡವು ಹಾಗೂ ಎರಡು ದೋಣಿಗಳನ್ನು ಜೆಸಿಬಿ ಬಳಸಿ ನಾಶಪಡಿಸಿದ್ದಾರೆ.


ಪಾಚಾಣಿ, ಕಲ್ಲಾರೆ, ಇಚ್ಲಂಗೋಡು, ಉಳುವಾರು ಮುಂತಾದ ಕಡೆಗಳಲ್ಲಿ ಈ ಕೃತ್ಯಗಳು ನಡೆಯುತ್ತಿದ್ದು, ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಎಸ್‌ಪಿ ಎಸ್. ಅನೂಪ್ ಮತ್ತು ಎಎಸ್‌ಪಿ ಅತುಲ್‌ರಾಮ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ಅನಧಿಕೃತ ಹೊಯ್ಮೆ ಸಂಗ್ರಹ ಹಾಗೂ ಸಾಗಾಟ ಮಾಡುವವರ ವಿರುದ್ಧ ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!