ಕೇರಳಕ್ಕೆ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಸಾಗಿಸುತ್ತಿದ್ದ ದಾಖಲೆಯಿಲ್ಲದ ಭಾರೀ ಮೊತ್ತದ ನಗದು ವಶ ಪಡಿಸಿದ ಮಂಜೇಶ್ವರ ಅಬಕಾರಿ

ಕೇರಳಕ್ಕೆ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಸಾಗಿಸುತ್ತಿದ್ದ 20 ಲಕ್ಷದ 80ಸಾವಿರ ರೂ ನಗದನ್ನು ವಶ ಪಡಿಸಿ ಓರ್ವನನ್ನು ಬಂಧಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜಯಶೀಲ ಪುಟ್ಟಣ್ಣ ಶೆಟ್ಟಿ (52) ಎಂಬ ವ್ಯಕ್ತಿ ಬಂಧಿತ ಆರೋಪಿಯೆಂದು ಹೆಸರಿಸಲಾಗಿದೆ.

ಶುಕ್ರವಾರ ಸಂಜೆ ಮಂಜೇಶ್ವರ ಅಬಕಾರಿ ಚೆಕೋಸ್ಟಿನಲ್ಲಿ ಅಬಕಾರಿ ಸರ್ಕಲ್ ಇನ್ಸೆಕ್ಟರ್ ಷಿಜಿಲ್ ಕುಮಾ‌ರ್ ನೇತೃತ್ವದಲ್ಲಿ ನಡೆಸಿದ ಬಸ್‌ ತಪಾಸಣೆಯಲ್ಲಿ ದಾಖಲೆ ರಹಿತ ನಗದು ವಶಪಡಿಸಲಾಯಿತು. ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಬಸ್ಸಿನಲ್ಲಿ ಹಣ ಸಾಗಾಟ ನಡೆದಿತ್ತು. ಈ ಸಂಬಂಧ ವಿಚಾರಣೆ ನಡೆಯುತ್ತಿದ್ದು, ಈ ಹಣ ಯಾರಿಂದ ಎಲ್ಲಿಗೆ ಸಾಗಾಟವಾಗುತ್ತಿತ್ತು ಎಂಬುದು ತಿಳಿದು ಬಂದಿಲ್ಲ.

SHARE
Loading spinner

Leave a Reply

Your email address will not be published. Required fields are marked *

error: Content is protected !!