ಕಾಸರಗೋಡು /ತಿರುವನಂತಪುರಂ: ಕೇಂದ್ರ ಹವಾಮಾನ ಇಲಾಖೆಯು ಕೇರಳ ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ನೆಚ್ಚರಿಕೆಯನ್ನು ನೀಡಿದೆ.ಇಂದು ಶುಕ್ರವಾರ ಎಲ್ಲಾ ಜಿಲ್ಲೆಗಳಲ್ಲೂ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ನಾಳೆ ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್ ಮತ್ತು ಮಲಪ್ಪುರಂ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಭಾನುವಾರ ಮಲಪ್ಪುರಂ, ಕೋಝಿಕ್ಕೋಡ್, ವಯನಾಡು ಹಾಗೂ ಸೋಮವಾರ ಪತ್ತನಂತಿಟ್ಟ, ಇಡುಕ್ಕಿ, ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಇರಲಿದೆ.

ಲಕ್ಷದ್ವೀಪ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳ ಮೇಲಿರುವ ಚಂಡಮಾರುತದ ಸುಳಿಗಾಳಿಯು ಈ ಮಳೆಗೆ ಮುಖ್ಯ ಕಾರಣವಾಗಿದೆ.ಕೆಲವು ಕಡೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ನಿರೀಕ್ಷೆಯಿದೆ.




Everything is well organized and the gaming experience is top notch. It is a very reliable place for anyone looking for excitement. Visit vnhitclubinc