ನಿಸ್ವಾರ್ಥ ಸೇವೆಗೆ ಮತ್ತೊಂದು ಹೆಸರಾಯಿತು ಮಧೂರು ಶೌರ್ಯ ಘಟಕ

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃ ಶ್ರೀ ಹೇಮಾವತಿ ಅಮ್ಮನವರ ಪೂರ್ಣ ಅನುಗ್ರಹದೊಂದಿಗೆ ಕಳೆದ 7 ವರ್ಷಗಳ ಹಿಂದೆ ಸಮಾಜಕ್ಕೆ ವರದಾನವಾಗುವ , ಆಪತ್ಕಾಲದಲ್ಲಿ ನೆರವಾಗುವ , ತುರ್ತು ಸಂದರ್ಭದಲ್ಲಿ ತಕ್ಷಣ ಸ್ಪಂದಿಸುವ , ಸಂತ್ರಸ್ಥರ ಬದುಕಿಗೆ ಭರವಸೆಯಾಗಿರುವ , ಸ್ಥಳಿಯ ಯೋಧರಂತೆ ಕಷ್ಟ ಕಾರ್ಪಣ್ಯಗಳನ್ನು ಸ್ಪಂದಿಸಿ , ಸಮಾಜಪರ ಕೆಲಸ ನಡೆಸಿ ಜನಪ್ರಿಯಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ “ಶೌರ್ಯ” ವಿಪತ್ತು ನಿರ್ವಾಹಣ ಕಾರ್ಯಕ್ರಮ ಪ್ರಾರಂಭಿಸಲಾಯಿತು .

ಕಾಸರಗೋಡು ಜಿಲ್ಲೆಯಲ್ಲಿ ಇದೀಗ ಕಳೆದ ಮೂರು ವರ್ಷಗಳಿಂದ ನಿರಂತರ ಸೇವೆಯಲ್ಲಿ ತೊಡಗಿಕೊಂಡು , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್(ರಿ) ಕಾಸರಗೋಡು ಮಧೂರು ಶೌರ್ಯ ವಿಪತ್ತು ನಿರ್ವಾಹಣ ಘಟಕದ ಒಟ್ಟು 16 ಮಂದಿ ಸ್ವಯಂ ಸೇವಕರನ್ನ ಓಳಗೊಂಡ ಘಟಕ ನಿನ್ನೆ 6 ಮಂದಿ ಸ್ವಯಂ ಸೇವಕರು ಸೇರಿ ಕೂಡ್ಲು ಸಮೀಪದ ಪಚ್ಚಕಾಡ್ ಕಾಡು , ಪೊದೆಯಲ್ಲಿ ತುಂಬಿಕೊಂಡ ತೀರಾ ನಿರ್ಗತಿಕ ಬಡ ಕುಟುಂಬ ವಾಸಿಸುತಿರುವ ಎರಡು ಮನೆಯ ಪರಿಸರವನ್ನು ಸ್ವಚ್ಛತೆ ಗೋಳಿಸಿ ಪ್ರಾಮಾಣಿಕತೆ ಮೆರೆದರು .

ಈ ಸಂದರ್ಭದಲ್ಲಿ ಮಧೂರು ಗ್ರಾಮಪಂಚಾಯತಿನ ಉಪಾದ್ಯಕ್ಷರಾದ ಶ್ರೀ ಭಾನು ಪ್ರಕಾಶ್ ಹಾಗೂ ಕೂಡ್ಲು ಕಾರ್ಯ ಕ್ಷೇತ್ರದ ಗೋಪಿಕೃಷ್ಣ ಸಂಘದ ಸದಸ್ಯರು , ಕಾಸರಗೋಡು ತಾಲೂಕಿನ ಶೌರ್ಯ ವಿಪತ್ತು ನಿರ್ವಾಹಣ ಘಟಕದ ಕ್ಯಾಪ್ಟನ್ ಶ್ರೀ ಬಿಜು ಕಪ್ಪಣ , ಮಧೂರು ಘಟಕದ ಸಂಯೋಜಕಿ ಶ್ರೀಮತಿ ವಿಶಾಲಾಕ್ಷಿ ಕೂಡ್ಲು , ಮಧೂರು ಘಟಕದ ಸ್ವಯಂ ಸೇವಕರಾದ ಪ್ರದೀಪ್ ಸೀತಾಂಗೋಳಿ , ಸೈಜೇಶ್ ಪರವನಡ್ಕ , ಪ್ರಕಾಶ್ ಮಿಪುಗುರಿ , ಬಬಿತಾ ಕೂಡ್ಲು ಉಪಸ್ಥಿತರಿದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!