ರಾಮಜನ್ಮಭೂಮಿ ಹೋರಾಟದ ರೂವಾರಿ ಪೂಜನೀಯ ಅಶೋಕ್ ಸಿಂಘಾಲ್ ಜೀಯವರ ಶತಮಾನೋತ್ಸವದ ಪ್ರಯುಕ್ತ ದೇಶವಿಡೀ ಈ ವರ್ಷ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಆ ಪ್ರಯುಕ್ತ ನಮ್ಮ ಪ್ರಾಂತದಲ್ಲಿ ಕಾರ್ಯಕ್ರಮಗಳ ಉಧ್ಘಟನಾ ಕಾರ್ಯಕ್ರಮ ಈಗಾಗಲೇ ಬೆಂಗಳೂರಿನಲ್ಲಿ ನಡೆದಿದ್ದು, ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗದ ವತಿಯಿಂದ ಮಾನ್ಯ ಅಶೋಕ್ ಸಿಂಘಾಲ್ ಜೀ ಅವರ ಶತಮಾನೋತ್ಸವ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವನ್ನು 02 ಅಕ್ಟೋಬರ್ 2026, ಶುಕ್ರವಾರ ಅಪರಾಹ್ನ 3:30 ಕ್ಕೆ, ಭೂವರಾಹ ಆಡಿಟೋರಿಯಂ, ಶಾರದಾ ವಿದ್ಯಾಲಯ, ಕೊಡಿಯಾಲ್ಬೈಲ್, ಮಂಗಳೂರಿನಲ್ಲಿ ಆಯೋಜಿಸಲಾಗಿದೆ.


- ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳವರು (ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂ, ಶ್ರೀಎಡನೀರು ಮಠ)
- ಪರಮಪೂಜ್ಯ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ (ಶ್ರೀ ವಜ್ರದೇಹಿ ಮಠ, ಗುರುಪುರ)
- ಪರಮಪೂಜ್ಯ ಸಾಧ್ವಿ ಮಾತಾನಂದಮಯೀ (ಶ್ರೀ ಗುರುದೇವದತ್ತ ಸಂಸ್ಥಾನಂ, ಒಡಿಯೂರು) ದಿವ್ಯ ಸಾನಿಧ್ಯ ವಹಿಸಲಿದ್ದು
ಡಾ. ಸದಾನಂದ ಪೂಜಾರಿ (ಮೂತ್ರರೋಗ ತಜ್ಞರು; ಅಧ್ಯಕ್ಷರು, ಭಾರತೀಯ ವೈದ್ಯಕೀಯ ಸಂಘ, ಮಂಗಳೂರು) ಇವರ ಅಧ್ಯಕ್ಷತೆಯಲ್ಲಿ
: ಶ್ರೀ ವೆಂಕಣ್ಣ ಕೊಯ್ಯೂರು ( ಸಾಮಾಜಿಕ ಮುಖಂಡರು ) ವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ - ಅಭ್ಯಾಗತರು
ಡಾ. ವಾಮನ ಶೆಣೈ (ಮಾನ್ಯ ಕ್ಷೇತ್ರೀಯ ಸಂಘ ಚಾಲಕರು, ರಾಷ್ಟ್ರೀಯ ಸ್ವಯಂಸೇವಕ ಸಂಘ)
ಡಾ. ಎಂ. ಬಿ. ಪುರಾಣಿಕ್ (ಕಾರ್ಯಕಾರಿಣಿ ಸದಸ್ಯರು, ವಿಶ್ವ ಹಿಂದೂ ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತ್ಯ; ಅಧ್ಯಕ್ಷರು, ಶಾರದಾ ಸಮೂಹ ಸಂಸ್ಥೆ, ಮಂಗಳೂರು) - ವಕ್ತಾರಾರು
ಶ್ರೀ ಟಿ.ಏ.ಪಿ. ಶೆಣೈ (ಉಪಾಧ್ಯಕ್ಷರು, ವಿಶ್ವ ಹಿಂದೂ ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತ್ಯ)
ಈ ಶ್ರೇಷ್ಠ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಲಾಗಿದೆ.
ಪೂಜನೀಯ ಅಶೋಕ್ ಸಿಂಘಾಲ್ ಜೀ ಯವರ ಅವರ ಕುರಿತು
ಉನ್ನತ ಅಧಿಕಾರಿಗಳ ಕುಟುಂಬದಲ್ಲಿ ಜನಿಸಿದ ಶ್ರೀ ಅಶೋಕ್ ಸಿಂಘಾಲ್ ಜೀ ಅವರು ಬಿ.ಟೆಕ್ ಪದವಿ ಪಡೆದ ನಂತರ, 1940ರ ದಶಕದಲ್ಲೇ ಆರ್ಎಸ್ಎಸ್ (RSS) ಜೊತೆ ಸಂಪರ್ಕ ಹೊಂದಿದರು. ಪೂಜನೀಯ ಗುರೂಜಿ, ಪರಮಪೂಜ್ಯ ಶ್ರೀ ಬಾಳಾಸಾಹೇಬ್ ದೇವರಸ್ ಮತ್ತು ಪರಮಪೂಜ್ಯ ಪ್ರೊಫೆಸರ್ ರಾಜೇಂದ್ರ ಸಿಂಗ್ (ರಜ್ಜು ಭೈಯ್ಯಾ) ಅವರ ಮಾರ್ಗದರ್ಶನದಲ್ಲಿ ಪೂರ್ಣಕಾಲಿಕ ಪ್ರಚಾರಕರಾಗಿ ಸಂಘಟನಾ ಕೆಲಸ ನಿರ್ವಹಿಸಿದರು.
ವಿಶ್ವ ಹಿಂದೂ ಪರಿಷತ್ನಲ್ಲಿ 1980ರಲ್ಲಿ ನಿಯೋಜಿತರಾಗಿ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ, 1984ರಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ನಂತರ ದೀರ್ಘಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ವೇದಗಳ ಪ್ರಚಾರ, ಗೋ ಸಂರಕ್ಷಣೆ, ಮತಾಂತರ ತಡೆಗೆ ಯುವಶಕ್ತಿಯ ಜಾಗೃತಿ, ಸಾಲು ಸಾಲು ಸೇವಾ ಕಾರ್ಯಗಳಲ್ಲಿ ಹಿಂದೂ ಸಮಾಜವು ಸಕ್ರಿಯವಾಗುವಂತೆ ಪ್ರೇರಣೆ ನೀಡಿದರು.

ರಾಮ ಜನ್ಮಭೂಮಿ ಚಳವಳಿಯಲ್ಲಿ 1984ರಲ್ಲಿ ದೆಹಲಿಯಲ್ಲಿ ನಡೆದ ಮೊದಲ ಧರ್ಮ ಸಂಸತ್ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು, ರಾಮ ಜನ್ಮಭೂಮಿ ವಿಚಾರವನ್ನು ಮುಂಚೂಣಿಗೆ ತಂದರು. 1989ರ ನಂತರ ರಾಮಮಂದಿರ ನಿರ್ಮಾಣದ ವೇದಿಕೆಯನ್ನು ಮುನ್ನಡೆಸಿಕೊಂಡು ಹೋದರು. ಶಂಕುಸ್ಥಾಪನೆ, ಶಿಲಾನ್ಯಾಸ ಹಾಗೂ ಕರಸೇವಾ ಚಳವಳಿಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಶೋಕ್ ಸಿಂಘಾಲ್ ಜೀ ಅವರು ಸಾಂಸ್ಕೃತಿಕ ಜಾಗೃತಿ ಮತ್ತು ರಾಮಮಂದಿರ ಚಳವಳಿಗೆ ಜೀವನ ಸಮರ್ಪಿಸಿದ ಶ್ರೇಷ್ಠ ನಾಯಕರಾಗಿದ್ದಾರೆ.
ವಂದನೆಗಳೊಂದಿಗೆ
ಶಿವಾನಂದ ಮೆಂಡನ್ ಹಾಗೂ ವಿಶ್ವ ಹಿಂದೂ ಪರಿಷತ್, ಮಂಗಳೂರು ವಿಭಾಗ

