ಮುಳ್ಳೇರಿಯದಲ್ಲಿ ವಿಷ ಸೇವಿಸಿ ಅಂಗನವಾಡಿ ಶಿಕ್ಷಕಿ ಮೃತ

ಕಾಸರಗೋಡು : ಮುಳ್ಳೇರಿಯದ ಕಾನಕೋಡು ಆಜಾದ್‌ ನಗರದ ಅಂಗನವಾಡಿ ಅಧ್ಯಾಪಕಿ ಬೇಬಿ (46) ಅವರು ವಿಷ ಸೇವಿಸಿ ಸಾವನ್ನಪ್ಪಿದ್ದಾರೆ.

ಬೋಂಗತ್ತಡ್ಕ ನಿವಾಸಿ ಸುಂದರ ಎಂಬವರ ಪತ್ನಿಯಾದ ಇವರು, ಬುಧವಾರ ಮಧ್ಯಾಹ್ನ ಸಮೀಪದ ಪ್ಲಾಂಟೇಷನ್‌ ಕಾರ್ಪೋರೇಷನ್‌ನ ಗೇರು ತೋಟದಲ್ಲಿ ವಿಷ ಸೇವಿಸಿದ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

​ಕೂಡಲೇ ಅವರನ್ನು ಮುಳೇರಿಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು. ನಂತರ ಕಾಸರಗೋಡು ಜನರಲ್‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!