ವಸತಿಗೃಹದಲ್ಲಿ ಯುವಕ, ಗೆಳತಿಯ ಮೇಲೆ ಹಲ್ಲೆ: 17 ವರ್ಷದ ಬಾಲಕ ಸೇರಿ ಮೂವರ ಬಂಧನ

ಕಾಸರಗೋಡು: ಪನತ್ತಡಿ ನಿವಾಸಿ ಹಾಗೂ ಗೆಳತಿಯನ್ನು ವಸತಿಗೃಹದ ಕೋಣೆಯಲ್ಲಿ ಅಕ್ರಮವಾಗಿ ಪ್ರವೇಶಿಸಿ ಹಲ್ಲೆ ನಡೆಸಿ, ಚಿನ್ನ ಹಾಗೂ ನಗದು ಅಪಹರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸರಗೋಡು ನಗರ ಠಾಣೆ ಪೊಲೀಸರು 17 ವರ್ಷದ ಬಾಲಕ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

​ಮಧೂರು ಎಸ್.ಪಿ ನಗರ ಕ್ವಾರ್ಟರ್ಸ್ ನಿವಾಸಿ ಸಾಬಿತ್ (30), ನಾಯ್ಮಾರ್ ಮೂಲದ ಅಕ್ಕರಪಳ್ಳ ನಿವಾಸಿ ಅಮೀರ್‌ಅಲಿ (30) ಹಾಗೂ 17 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಪನತ್ತಡಿಯ ಕೆ.ಎ. ಮುಹಮ್ಮದ್ ಉದೈಫ್ (22) ಮತ್ತು ಅವರ ಗೆಳತಿ ಈ ಆಕ್ರಮಣಕ್ಕೆ ಒಳಗಾದವರಾಗಿದ್ದಾರೆ.

​ಕಾಸರಗೋಡು ಹೊಸ ಬಸ್ ನಿಲ್ದಾಣದ ಸಮೀಪದ ವಸತಿಗೃಹದಲ್ಲಿ ಈ ಕೃತ್ಯ ನಡೆದಿದ್ದು, ಆರೋಪಿಗಳು ಮುಹಮ್ಮದ್ ಉದೈಫ್‌ಗೆ ಬೆದರಿಸಿ, ಯುವತಿಯ ಕಿವಿಯಲ್ಲಿದ್ದ ಆಭರಣ ಹಾಗೂ ಎಟಿಎಂ ಕಾರ್ಡ್ ಬಳಸಿ 10,000 ರೂ. ನಗದನ್ನು ಅಪಹರಿಸಿರುವುದಾಗಿ ದೂರಿನಲ್ಲಿ ದಾಖಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!