ನಿಯಂತ್ರಣ ತಪ್ಪಿದ ಬೈಕ್ ಹೊಳೆಗೆ ಉರುಳಿ ಯುವಕನ ದಾರುಣ ಅಂತ್ಯ

ಕುಂಬಳೆ: ನಿಯಂತ್ರಣ ತಪ್ಪಿದ ಬೈಕ್ ರಕ್ಷಣಾ ತಡೆಗೋಡೆ ಇಲ್ಲದ ಹಳೆಯ ಕಿರಿದಾದ ಸೇತುವೆಯಿಂದ ಹೊಳೆಗೆ ಉರುಳಿ ಬಿದ್ದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾನೆ.
ಕೋಯಿಪ್ಪಾಡಿ, ದೇವಿಕಿ ನಿವಾಸದ ಉಮೇಶ್ ಸಾಲಿಯಾರ ಪುತ್ರ ಸುಭಾಷ್ ಚಂದ್ರಬೋಸ್ (42) ಸಾವನ್ನಪ್ಪಿದ ದುರ್ದೈವಿ.

ಇವರು ಕಾಂಕ್ರೀಟ್ ಕೆಲಸದ ಕಾರ್ಮಿಕರಾಗಿದ್ದರು.ಗುರುವಾರ ರಾತ್ರಿ ಸುಮಾರು ಹತ್ತು ಗಂಟೆಯ ವೇಳೆಗೆ ಈ ಅಪಘಾತ ಸಂಭವಿಸಿದೆ.
ಸುಭಾಷ್ ಅವರು ಷೇಡಿಕಾವ್ ರಸ್ತೆಯ ಮೂಲಕ ಕುಂಬಳೆ ಕಡೆಗೆ ಬೈಕಿನಲ್ಲಿ ತೆರಳುತ್ತಿರುವ ಮಧ್ಯೆ ನಂಬಿಕರ ಇಳಿವಿನಲ್ಲಿ ಸೇತುವೆಯ ಬಳಿ ಬಂದಾಗ ಬೈಕ್ ನಿಯಂತ್ರಣ ತಪ್ಪಿ ಸೇತುವೆಗೆ ರಕ್ಷಣಾ ತಡೆಇಲ್ಲದ ನೇರವಾಗಿ ಹೊಳೆಗೆ ಉರುಳಿ ಬಿದ್ದಿದೆ.

​ಬಿದ್ದ ವೇಗಕ್ಕೆ ತಲೆಗೆ ಗಂಭೀರ ಗಾಯಗಳಾಗಿದ್ದ ಸುಭಾಷ್ ಅವರನ್ನು ಸ್ಥಳೀಯರು ತಕ್ಷಣವೇ ಕುಂಬಳೆ ಜಿಲ್ಲಾ ಸಹಕಾರ ಆಸ್ಪತ್ರೆಗೆ ತಲುಪಿಸಿದರಾದರೂ, ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಕುಂಬಳೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಹಜರಿನ ನಂತರ ಮೃತದೇಹವನ್ನು ಮುಂದಿನ ಪ್ರಕ್ರಿಯೆಗಳಿಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!