ಪರಿಸರ ಸ್ನೇಹಿ ದೀಪಾವಳಿ ಆಚರಿಸಿ, ಗೋಸೇವಕರನ್ನು ಗೌರವಿಸಿ: ಗೋ ಸಮ್ಮಾನ್ ಅಭಿಯಾನ ಸಮಿತಿ ಕರೆ

ಮಂಗಳೂರು: ದೀಪಾವಳಿ ಹಾಗೂ ಗೋಪಾಷ್ಟಮಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವುದರೊಂದಿಗೆ ಗೋಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಗೋ ಸಮ್ಮಾನ್ ಅಭಿಯಾನ ಸಮಿತಿ ಮನವಿ ಮಾಡಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಮಿತಿಯು, ದೀಪಾವಳಿ ಸಂದರ್ಭದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಪರಿಸರ ಸ್ನೇಹಿ ಪಟಾಕಿಗಳನ್ನು ಮಾತ್ರ ಬಳಸಬೇಕು. ಪಟಾಕಿಗಳ ದುಂದುವೆಚ್ಚ ಕಡಿಮೆ ಮಾಡಿ ಹೆಚ್ಚು ದೀಪಗಳನ್ನು ಬೆಳಗಿಸುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು ಎಂದು ಕರೆ ನೀಡಿದೆ.

ಗೋಪಾಷ್ಟಮಿಯಂದು ಗೋಮಾತೆಯನ್ನು ಪೂಜಿಸುವುದರ ಜೊತೆಗೆ ನಿಸ್ವಾರ್ಥವಾಗಿ ಗೋವುಗಳನ್ನು ಸಾಕಿ, ಸೇವೆ ಸಲ್ಲಿಸುತ್ತಿರುವ ಗೋಪಾಲಕರು ಹಾಗೂ ಗೋಸೇವಕರನ್ನು ಗೌರವಿಸುವ ಮೂಲಕ ‘ಗೋ ಸಮ್ಮಾನ್ ಅಭಿಯಾನ’ದಲ್ಲಿ ಭಾಗವಹಿಸಬೇಕು. ಹಬ್ಬದ ಸಂದರ್ಭದಲ್ಲಿ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ, ಉಳಿತಾಯದ ಒಂದು ಸಣ್ಣ ಭಾಗವನ್ನು ಸುತ್ತಮುತ್ತಲಿನ ಗೋಪಾಲಕರಿಗೆ ನೀಡುವ ಮೂಲಕ ಗೋಸಂರಕ್ಷಣೆಯ ಕಾರ್ಯಕ್ಕೆ ನೆರವಾಗಬೇಕು ಎಂದು ಮನವಿ ಮಾಡಿದೆ.

ಗೋಸಂರಕ್ಷಣೆ ಕೇವಲ ಒಬ್ಬರ ಜವಾಬ್ದಾರಿಯಾಗದೆ ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಜಿಲ್ಲೆಯಾದ್ಯಂತ ಗೋ ಸಮ್ಮಾನ್ ಅಭಿಯಾನ ಯಶಸ್ವಿಯಾಗಲು ಹಿಂದೂ ಬಾಂಧವರು, ಗೋಪ್ರೇಮಿಗಳು ಹಾಗೂ ಧರ್ಮಾಭಿಮಾನಿಗಳು ಸಹಕರಿಸಬೇಕು ಎಂದು ಸಮಿತಿ ತಿಳಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!