
ಬೆಂಗಳೂರು: ಆರೋಗ್ಯ ಜಾಗೃತಿಗಾಗಿ ಕರ್ನಾಟಕ ಆರೋಗ್ಯ ಸಾಹಿತ್ಯ ಪರಿಷತ್ ಹಾಗೂ ಬೆಂಗಳೂರು ಹೆಲ್ತ್ ಫೌಂಡೇಶನ್, ವೈದ್ಯಲೋಕ ಆರೋಗ್ಯ ಮಾಸಪತ್ರಿಕೆಯ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ರಾಜ್ಯಮಟ್ಟದ ವೈದ್ಯಲೋಕ ಛಾಯಾಚಿತ್ರ ಮತ್ತು ವ್ಯಂಗ್ಯಚಿತ್ರ ಸ್ಪರ್ಧೆ–2026ರ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಆರೋಗ್ಯ ಜಾಗೃತಿ, ಸಾಮಾಜಿಕ ಕಳಕಳಿ ಹಾಗೂ ಸೃಜನಶೀಲ ಅಭಿವ್ಯಕ್ತಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಹಾಗೂ ಗಡಿನಾಡಿನ ಸ್ಪರ್ಧಿಗಳು ಭಾಗವಹಿಸಿದ್ದರು.

ಛಾಯಾಚಿತ್ರ ಸ್ಪರ್ಧೆ – 2026
ಪ್ರಥಮ ಬಹುಮಾನ: ಅನಂತ್ ಹರಿತ್ಸ, ಬೆಂಗಳೂರು.
ದ್ವಿತೀಯ ಬಹುಮಾನ: ಗಣಪತಿ ಕೆ. ಹೆಗಡೆ, ಮೈಸೂರು.
ತೃತೀಯ ಬಹುಮಾನ: ಡಾ. ಅಶ್ವಿನಿ ಎನ್., ಬೆಂಗಳೂರು ಹಾಗೂ ಕೆ.ಎಸ್. ಹೇಮಲತಾ ರೇವಣ್ಣ, ಬೆಂಗಳೂರು.
ಸಮಾಧಾನಕರ ಬಹುಮಾನ: ಚಂದ್ರಶೇಖರ್ ಬ್ಯಾಕೋಡ್, ಕಲಬುರಗಿ; ಹೆಚ್. ಜಿ. ಲಕ್ಷ್ಮೀನಾರಾಯಣ ರಾವ್, ಮೈಸೂರು; ನಾಗರಾಜ್ ಟಿ. ಸೂರಣಗಿ, ಗದಗ; ವೀರಶೆಟ್ಟಿ ಎಂ. ಪಾಟೀಲ, ಬೀದರ್; ಶಿವಶರಣ ಎಸ್. ಡೊಣ್ಣೂರಕರ್, ಕಲಬುರಗಿ ಹಾಗೂ ಸೌಂದರ್ ರಾಜ್ ಜಿ ಕೋಲಾರ.

ವ್ಯಂಗ್ಯಚಿತ್ರ ಸ್ಪರ್ಧೆ – 2026
ಪ್ರಥಮ ಬಹುಮಾನ: ಹರಿಶ್ಚಂದ್ರ ಶೆಟ್ಟಿ ಎಂ (ಹರಿಣಿ), ಮಂಗಳೂರು.
ದ್ವಿತೀಯ ಬಹುಮಾನ: ಜಗಜೀವನ್ ಶೆಟ್ಟಿ, ಉಡುಪಿ ಮತ್ತು ವೆಂಕಟ್ ಭಟ್ ಎಡನೀರ್, ಕಾಸರಗೋಡು.
ತೃತೀಯ ಬಹುಮಾನ: ಸಿ.ಆರ್. ಶ್ರೀಧರ್, ಬೆಂಗಳೂರು ಹಾಗೂ ರಾಮಚಂದ್ರ ನಾಡಿಗ್, ಶಿವಮೊಗ್ಗ.
ಸಮಾಧಾನಕರ ಬಹುಮಾನ: ಹನುಮಂತ ಎಂ., ದೇಶಕುಲಕರ್ಣಿ, ಧಾರವಾಡ ; ಎಸ್. ಮಂಜುನಾಥ್, ಬೆಂಗಳೂರು; ಬಿ.ವಿ. ಪಾಂಡುರಂಗ ರಾವ್, ಬೆಂಗಳೂರು; ರಘುಪತಿ ಶೃಂಗೇರಿ, ಬೆಂಗಳೂರು; ವಾಸವಿ ಪೈಲೂರು, ಸುಳ್ಯ, ಮಂಗಳೂರು; ಯು. ರಮೇಶ್, ಬಳ್ಳಾರಿ ಹಾಗೂ
ಜಾನ್ ಚಂದ್ರನ್, ಮಂಗಳೂರು.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಸ್ಪರ್ಧಿಗಳಿಗೆ ಹಾಗೂ ವಿಜೇತರಿಗೆ ಕರ್ನಾಟಕ ಆರೋಗ್ಯ ಸಾಹಿತ್ಯ ಪರಿಷತ್ ಹಾಗೂ ಬೆಂಗಳೂರು ಹೆಲ್ತ್ ಫೌಂಡೇಶನ್ ಬಳಗ ಅಭಿನಂದನೆ ಸಲ್ಲಿಸಿದೆ. ಆರೋಗ್ಯ ಕ್ಷೇತ್ರದಲ್ಲಿ ಜನಜಾಗೃತಿ ಮೂಡಿಸುವುದರ ಜೊತೆಗೆ ಸಾಹಿತ್ಯ, ಕಲೆ ಮತ್ತು ಸೃಜನಶೀಲ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಇಂತಹ ಕಾರ್ಯಕ್ರಮಗಳನ್ನು ಮುಂದೆಯೂ ಆಯೋಜಿಸಲಾಗುವುದು ಎಂದು ಕರ್ನಾಟಕ ಆರೋಗ್ಯ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀಕೃಷ್ಣ ಮಾಯ್ಲೆಂಗಿ ತಿಳಿಸಿದ್ದಾರೆ.

