ಜಾನಪದ ಪರಿಷತ್ತು ಕೇರಳ ರಾಜ್ಯ ಅಧ್ಯಕ್ಷರಾಗಿ ಡಾ. ವಾಮನ್ ರಾವ್ ಆಯ್ಕೆ

ಕಾಸರಗೋಡು : ಜನಪ್ರಿಯ ಕನ್ನಡ ಸಂಸ್ಥೆ ಕನ್ನಡ ಭವನ ಮತ್ತು ಗ್ರಂಥಾಲಯ (ರಿ. 223/2008)ಇದರ ಅಂಗ ಸಂಸ್ಥೆಗಳಾದ ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಉಚಿತ ಸಾರ್ವಜನಿಕ ವಾಚನಾಲಯ, ಕರ್ನಾಟಕ ದಿಂದ ಯಾ ಹೊರನಾಡಿನಿಂದ ಕಾಸರಗೋಡು ಪ್ರದೇಶಕ್ಕೆ ಬರುವ ಸಾಂಸ್ಕೃತಿಕ ರಾಯಬಾರಿಗಳಿಗೆ “ಉಚಿತ ವಸತಿ ವ್ಯವಸ್ಥೆ “ಹಾಗೂ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ಸ್ಥಾಪಕ ಸಂಚಾಲಕರಾಗಿರುವ ಡಾ. ವಾಮನ್ ರಾವ್ ಬೇಕಲರನ್ನು ಕನ್ನಡ ಜಾನಪದ ಪರಿಷತ್ತು ಬೆಂಗಳೂರಿನ ಸ್ಥಾಪಕ ಅಧ್ಯಕ್ಷರಾಗಿರುವ ಡಾ. ಎಸ್ ಬಾಲಾಜಿ ಇವರು ಕೇರಳ ರಾಜ್ಯ ಕಾಸರಗೋಡು ಘಟಕದ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ನೀಡಿದ್ದಾರೆ.


ಈ ನಿಯಮನದ ಮೇರೆಗೆ, ಕಾಸರಗೋಡು ಜಿಲ್ಲೆಯ ಜಾನಪದ ವಿದ್ವಾಂಸರು, ಕಲಾವಿದರು, ಜಾನಪದ ಕಲಾ ಕಾಯಕ ಯೋಗಿಗಳು, ತಂಡಗಳು, ಆಸಕ್ತ ಜಾನಪದ ವ್ಯಕ್ತಿಗಳು ಡಾ. ವಾಮನ್ ರಾವ್ ಬೇಕಲ್, ಅಧ್ಯಕ್ಷರು, ಕನ್ನಡ ಜಾನಪದ ಪರಿಷತ್ತು, ಕನ್ನಡ ಭವನ ಸಂಕೀರ್ಣ, ನುಳ್ಳಿಪ್ಪಾಡಿ, ಕಾಸರಗೋಡು 671121.ಮೊ. 9633073400,ಈ ವಿಳಾಸದಲ್ಲಿ ಸಂಪರ್ಕಿಸಬೇಕಾಗಿ ವಿನಂತಿ.


ಸದ್ಯದಲ್ಲಿಯೇ ಅದ್ದೂರಿ ಉದ್ಘಾಟನೆ ಗೊಳ್ಳಲಿರುವ ಕನ್ನಡ ಜಾನಪದ ಪರಿಷತ್ತು ಕಾಸರಗೋಡು ಘಟಕದ ಆಯ್ದ ಆಸಕ್ತರ ಸಮಿತಿಯಲ್ಲಿ ಸೇರ್ಪಡೆಗೊಳ್ಳಲು ಇಚ್ಚಿಸುವ ಜಾನಪದ ಕಾಯಕ ಯೋಗಿಗಳು 9633073400ಈ ಸಂಖ್ಯೆಯಲ್ಲಿ ಸಂಪರ್ಕಿಸಬೇಕು.
ಉದ್ಘಾಟನಾ ಸಮಾರಂಭದಲ್ಲಿ 10ಮಂದಿ ಜಾನಪದ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಮೇರು ವ್ಯಕ್ತಿತ್ವಗಳನ್ನು “ಜಾನಪದ ಕುಲ ಪುರಸ್ಕಾರ “ಪ್ರಶಸ್ತಿ ಹಾಗೂ 5ತಂಡಗಳಿಗೆ “ಜಾನಪದ ಕುಲ ಸಾಧಕ ಪ್ರಶಸ್ತಿ “ನೀಡಿ ಗೌರವಿಸಲಿದೆ. ಇದಕ್ಕೆ ಸಂಬಂಧ ಪಟ್ಟ ದಾಖಲೆಯೊಂದಿಗೆ ಡಾ ವಾಮನ್ ರಾವ್ ಬೇಕಲ್ ಇವರನ್ನು ವಾಟ್ಸಪ್ ಮೂಲಕ ಸಂಪರ್ಕಿಸಬೇಕೆಂದು ಕನ್ನಡ ಜಾನಪದ ಪರಿಷತ್ತು ಹಾಗೂ ಕನ್ನಡ ಭವನ ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!