ಬಜ್ಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ರಾಜ್ಯ ಹೆದ್ದಾರಿಗಳಲ್ಲಿ ಹೊಂಡಗುಂಡಿಗಳಿಂದ ಕೂಡಿದ ಹದಗೆಟ್ಟ ರಸ್ತೆಗಳನ್ನು ಕೂಡಲೇ ದುರಸ್ತಿಗೊಳಿಸಿ ಡಾಮರೀಕರಣ ಮಾಡಬೇಕೆಂದು ಆಗ್ರಹಿಸಿ, ಇಂದು ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ವತಿಯಿಂದ ಬಜ್ಪೆ ಚೆಕ್ಪೋಸ್ಟ್ ಬಳಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಪ್ರತಿಭಟನೆ ನಡೆಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಸಿರಾಜ್ ಬಜ್ಪೆ
“ಇಂದು ನಾವು ಶಾಂತಿಯುತವಾಗಿ ಕೇವಲ ಬಜ್ಪೆ ಭಾಗದ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಮಾತ್ರ ಪ್ರತಿಭಟನೆಗೆ ಆಹ್ವಾನಿಸಿದ್ದೇವೆ. ಹದಗೆಟ್ಟಿರುವ ರಾಜ್ಯ ಹೆದ್ದಾರಿಯ ಹೊಂಡಗುಂಡಿಗಳನ್ನು ಕೂಡಲೇ ಮುಚ್ಚಿ, ಸಮರ್ಪಕವಾಗಿ ಡಾಮರೀಕರಣ ಮಾಡಬೇಕು. ಮತ್ತೆ ಕೇವಲ ತೇಪೆ ಹಾಕುವ ಮೂಲಕ ಕಾಮಗಾರಿ ಮುಗಿಸುವ ಪ್ರಯತ್ನ ಮುಂದುವರಿಸಿದರೆ, ಮುಂದಿನ ದಿನಗಳಲ್ಲಿ ಬಜ್ಪೆಯ ಸಮಸ್ತ ನಾಗರಿಕ ಬಂಧುಗಳನ್ನು ಒಗ್ಗೂಡಿಸಿ ರಾಜ್ಯ ಹೆದ್ದಾರಿ ಬಂದ್ ಮಾಡುವ ಮೂಲಕ ಬೃಹತ್ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.ಕೊನೆಗೆ PWD ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಮನವಿ ನೀಡಲಾಯಿತು .

ಪ್ರತಿಭಟನೆಯಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಉಪಾಧ್ಯಕ್ಷರಾದ ಇಸ್ಮಾಯಿಲ್ ಇಂಜಿನಿಯರ್, ಕಾನೂನು ಸಲಹೆಗಾರರಾದ ಮಾಧವ ಅಮೀನ್, ದಲಿತ ಸಂಘದ ಮುಖಂಡರಾದ ಮಂಜಪ್ಪ ಪುತ್ರನ್, ಬಜ್ಪೆ ಪಟ್ಟಣ ಪಂಚಾಯತ್ ಕೌನ್ಸಿಲರ್ಗಳಾದ ಆಯಿಷಾ, ವೀಣಾ ಮತ್ತು ಫರ್ಜಾನ ,ಸದಸ್ಯರಾದ ಧನವಂತೀ ವೇದಿಕೆಯ ಪ್ರಧಾನ ಕಾರ್ಯದರ್ಶಿ ನಿಸಾರ್ ಕರಾವಳಿ, ಬಜ್ಪೆ ರೋಟರಿ ಕ್ಲಬ್ನ ಮಾಜಿ ಅಧ್ಯಕ್ಷರಾದ ರಾಬರ್ಟ್ ರೇಗೋ, ಮಳವೂರು ಗ್ರಾಮ ಪಂಚಾಯತ್ನ ಮಾಜಿ ಸದಸ್ಯರಾದ ನಜೀರ್, SDPI ಮುಖಂಡರು ಹಾಗೂ ಗ್ರಾ ಪಂ ಮಾಜಿ ಸದಸ್ಯರಾದ ನಜೀರ್ ಕಿನ್ನಿಪದವು, ಹಿರಿಯರಾದ ಮೋನಾಕಾ ಹಾಗೂ ಸಲೀಂ ಹಾಜಿ, ಕಂದಾವರ ಗ್ರಾಮ ಪಂಚಾಯತ್ನ ಮಾಜಿ ಸದಸ್ಯರಾದ ಎಂ.ಕೆ. ಅಶ್ರಫ್, ಮೊಹಮ್ಮದ್ ಕಲ್ವಾರ್, ಎಂ.ಜೆ.ಎಂ. ಮಸೀದಿಯ ಸದಸ್ಯರಾದ ಆಸಿಫ್ ರೋಷನ್, ಉದ್ಯಮಿ ಫಯಾಝ್ ಅಹಮದ್ ,ಸಾಮಾಜಿಕ ಕಾರ್ಯಕರ್ತ ಮ್ಯಾಕ್ಸಿಮ್ ಅಲ್ಮೆಡಾ ,ರೇಗೋ, ವೇದಿಕೆಯ ಉಪಾಧ್ಯಕ್ಷರು ಹಾಗೂ ದಲಿತ ಸಂಘದ ನಾಯಕರಾದ ವಸಂತ್, ಕೆಪಿಸಿಸಿ ಸಾಮಾಜಿಕ ಜಾಲತಾಣದ ಹಫೀಝ್ ಕೊಲಂಬೆ ,ರೋಬರ್ಟ್ ಡಿ’ಕುನ್ಹಾ ,ಚಾರ್ಲಿ ಡಿ ಕುನ್ಹಾ ,ಖಾದರ್ ಜರಿ ,ಅನ್ವರ್ ರಝಕ್ ,ಅಝರ್,ಅಸ್ಲಾಂ ,ಅಬ್ಬಾಸ್ ಏರ್ಪೋರ್ಟ್ ,ರಹಮತುಲ್ಲಾ ,ಅಝೀಜ್ ಸೇರಿದಂತೆ ಹಲವು ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ರಿಕ್ಷಾ ಚಾಲಕ ಮಾಲಕ ಸಂಘದ ಪದಾಧಿಕಾರಿಗಳೂ ,ಹಾಗೂ ನಾಗರಿಕ ಬಂಧುಗಳು ಭಾಗವಹಿಸಿ ಪ್ರತಿಭಟನೆಗೆ ಧ್ವನಿಗೂಡಿಸಿದರು.

