ಡೆಮ್ಮ0ಗರ ಮಸೀದಿಯಲ್ಲಿ ಜಲಾಲಿಯ್ಯ ರಾತೀಬ್ ವಾರ್ಷಿಕ ಕಾರ್ಯಕ್ರಮ

ಪುತ್ತೂರು :ನೂರುಲ್ ಉಲಮಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮತ್ತು ಕೆ ಕೆ ಮಸ್ಜಿದ್ ಅಹ್ದಲಿಯ ನಗರ ಡೆಮ್ಮoಗರ, ಬೆಟ್ಟoಪಾಡಿ ಇದರ ಆಶ್ರಯದಲ್ಲಿ ಜಲಾಲಿಯ್ಯ ರಾತೀಬ್ ವಾರ್ಷಿಕ ಕಾರ್ಯಕ್ರಮವು ಬಹು. ಅಸ್ಸಯ್ಯದ್ ಮುಖ್ತಾರ್ ತಂಗಳ್ ಕುಂಬೋಲ್ ಇವರ ನೇತೃತ್ವದಲ್ಲಿ ನಡೆಯಿತು. ಬಹು.ಅಲ್ಹಾಜ್ ಅಬೂಹಾಮಿದ್ ಝಕರಿಯ ಫೈಝಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ದುವಾ ನೆರವೇರಿಸಿದರು. ಬಹು. ಅಬ್ಬಾಸ್ ಸಅದಿ ಮುದರ್ರಿಸ್ ಡೆಮ್ಮoಗರ ಪ್ರಾಸ್ತಾವಿಕ ವಾಗಿ ಮಾತನಾಡಿದರು.

ಬಹು | ಅನ್ವರ್ ಇಬ್ರಾಹಿಂ ತಂಗಳ್ ತ್ರಿಕರಿಪುರ, ಬಹು | ಜಬ್ಬಾರ್ ತಂಗಳ್ ಸೇರಿದಂತೆ ಮುಖ್ಯ ಅತಿಥಿಗಳಾಗಿ ಹಲವಾರು ಪ್ರಮುಖ ಉಲಮಾಗಳು, ಸಾದಾತುಗಳು, ಸಾಮಾಜಿಕ, ಧಾರ್ಮಿಕ ಮುಖಂಡರು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು. ಸ್ತ್ರೀಯರಿಗೆ ಪ್ರತ್ಯೇಕ ಸ್ಥಳವಕಾಶ ಏರ್ಪಡಿಸಲಾಗಿತ್ತು. ಜಲಾಲಿಯ್ಯ ರಾತೀಬ್ ಸಮಿತಿಯ ಅಬ್ದುಲ್ ರಹ್ಮಾನ್ ಕೈಕಾರ, ಮೂಸೆ ಕುಂಞಿ ಚೆಲ್ಯಡ್ಕ, ಅಬ್ದುಲ್ ರಹ್ಮಾನ್ ಎಂಪೆಕಲ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು, ಸ್ವಾಗತ ಸಮಿತಿಯ ಮುಹಮ್ಮದ್ ಅಶ್ರಫ್ ಕೆಜಿಎನ್, ಸಿದ್ದಿಕ್ ತ್ರಿ ವನ್ ತ್ರಿ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ವಿವಿಧ ಕೆಲಸಗಳಲ್ಲಿ ಸಹಕರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ನಡೆಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!