ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಯುವತಿಯರು ನಾಪತ್ತೆ; ಪೊಲೀಸರಿಂದ ತೀವ್ರ ಶೋಧ

ಕಾಸರಗೋಡು : ವಿದ್ಯಾ‌ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಯುವತಿಯರು ನಾಪತ್ತೆಯಾಗಿರುವ ಕುರಿತು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಪಾಡಿ ಎಡನೀರಿನ ಆಯಿಷಾ ಷರೀಫ್ (18) ಹಾಗೂ ಪಾಡಿ ನಾಲ್ಕಡ್ಕದ ಗೋಪಿನಾಥ್ ಅವರ ಪತ್ನಿ ಕೀರ್ತನ (22) ನಾಪತ್ತೆಯಾದವರಾಗಿದ್ದಾರೆ.

​ಆಯಿಷಾ ಷರೀಫ್ ಬುಧವಾರ ಸಂಜೆ ವಿದ್ಯಾ‌ನಗರದ ಸುಜುಕಿ ಶೋರೂಮ್‌ಗೆ ತೆರಳಿದವರು ವಾಪಸ್‌ ಮನೆಗೆ ಬಾರದಿರುವುದಾಗಿ ಅವರ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಇತ್ತ ಕೀರ್ತನ ಗುರುವಾರ ಸಂಜೆ 3.30ಕ್ಕೆ ರೇಷನ್ ಅಂಗಡಿಗೆಂದು ಹೋದವರು ಕಾಣೆಯಾಗಿದ್ದು, ಪತಿಯ ಸಹೋದರ ಈ ಬಗ್ಗೆ ವಿದ್ಯಾ‌ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶೋಧ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!