

ಸೂರಂಬೈಲು: ಅಡೂರಿನಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ವಿಜ್ಞಾನಮೇಳದಲ್ಲಿ ಸೂರಂಬೈಲು ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಯುಪಿ ವಿಭಾಗ ಐಟಿ ಮೇಳದ ಟೈಪಿಂಗ್ ಸ್ಪರ್ಧೆಯಲ್ಲಿ ಆದರ್ಶ್ ಪ್ರಥಮ, ಶೀಟ್ ಮೆಟಲ್ ವರ್ಕ್ನಲ್ಲಿ ಆದಿಲ್ ಫರ್ ಹಾನ್ ಪ್ರಥಮ, ಹೈಸ್ಕೂಲ್ ವಿಭಾಗದ ಗಣಿತ ಸೆಮಿನಾರ್ ನಲ್ಲಿ ಗಿರಿಧರ್ ಎಸ್ ಕೆ ದ್ವಿತೀಯ, ಬೀಡ್ಸ್ ವರ್ಕ್ನಲ್ಲಿ ವೈಷ್ಣವಿ ಪಿ ತೃತೀಯ ಸ್ಥಾನಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.

ಆದರ್ಶ್

ಆದಿಲ್ ಫರ್ ಹಾನ್

ಗಿರಿಧರ್ ಎಸ್ ಕೆ

ವೈಷ್ಣವಿ ಪಿ


