“ಕೇರಳ ತುಳು ಅಕಾಡೆಮಿ ವತಿಯಿಂದ ಪೈವಳಿಕೆಯಲ್ಲಿ ನಡೆದ ಆಟಿಡೊಂಜಿ ದಿನ ಆಚರಣೆ ನಿಜವಾಗಿಯೂ ಶ್ಲಾಘನೀಯ, ಮುಂದಿನ ದಿನಗಳಲ್ಲಿ ವಿಶ್ವ ತುಳು ಆಯನ ಮಂಜೇಶ್ವರದಲ್ಲಿ ನಡೆಯಲಿ….” ಪೈವಳಿಕೆಯಲ್ಲಿ ತುಳು ಅಕಾಡೆಮಿ ಕಾರ್ಯಕ್ರಮ “”ಆಟಿಡೊಂಜಿ ದಿನ ” ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಮಂಜೇಶ್ವರ ಶಾಸಕರಾದ ಎ ಕೆ ಎಂ ಅಶ್ರಫ್ ನುಡಿದರು.
ಪೈವಳಿಕೆಯಲ್ಲಿ ಕೇರಳ ತುಳು ಅಕಾಡೆಮಿಯ ವತಿಯಿಂದ (10-8-2025 ) ನಡೆದ “ಆಟಿಡೊಂಜಿ ದಿನ” ಕಾರ್ಯಕ್ರಮವನ್ನು ಉದ್ಘಾಟನೆ ಮಾಡುತ್ತಾ ಮಂಜೇಶ್ವರ MLA AKM ಅಶ್ರಫ್, ಸಮಾಜದ ಸ್ವಾಸ್ತ್ಯಕ್ಕೆ ಅನುಕರಣೀಯ ಸಂದೇಶ ಸಾರುವ ಈ ಆಟಿಡೊಂಜಿ ದಿನ ಕಾರ್ಯಕ್ರಮ ನಿಜವಾಗಿಯೂ ಅಭಿನಂದನಾರ್ಹ ಎಂದರು. ಸಮಾಜದಲ್ಲಿ ರೋಗರುಜಿನಗಳನ್ನು ಇಲ್ಲವಾಗಿಸುವಲ್ಲಿ ಆಟಿ ಕಲಂಜದ ಮಹಿಮೆಯ ಬಗ್ಗೆ ಕೂಡ ಅವರು ನೆನಪಿಸಿದರು . ತುಳು ಭಾಷೆ ಸಂಸ್ಕೃತಿಯನ್ನು ಬೆಳೆಸುವಲ್ಲಿ ಅಕಾಡೆಮಿ ಇನ್ನಷ್ಟು ಶ್ರಮಿಸಲಿ ಮುಂದಿನ ದಿನದಲ್ಲಿ ವಿಶ್ವ ತುಳು ಸಮ್ಮೇಳನ ಮಂಜೇಶ್ವರ ದಲ್ಲಿ ನಡೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಚಾಲನೆಕೊಟ್ಟ ಕ್ರಿಸ್ತ ರಾಜ ದೇವಾಲಯ ಕಯ್ಯಾರದ ಧರ್ಮಗುರುಗಳಾದ ವಂದನೀಯ ಫಾದರ್ ವಿಶಾಲ್ ಮೋನಿಸ್ ರವರು ಮಾತನಾಡಿ ತುಳು ಭಾಷೆ ಸಂಸ್ಕೃತಿ ಯನ್ನು ಉಳಿಸುವಲ್ಲಿ ತುಳು ಅಕಾಡೆಮಿಯ ಪಾತ್ರ ಬಲು ದೊಡ್ಡದು, ಮುಂದಿನ ದಿನಗಳಲ್ಲಿ ವೈವಿದ್ಯಮಯ ತುಳು ಉತ್ಸವ ಮುಂತಾದ ತುಳು ಕಾರ್ಯಕ್ರಮ ಗಳನ್ನು ಸಂಘಟಿಸುವoತಾಗಲಿ ಎಂದು ಹಾರೈಸಿದರು.ಬಳಿಕ ಮಾತನಾಡಿದ ಪೈವಳಿಕೆ ಅರಮನೆ ರಂಗತ್ರೈ ಅರಸರು ಹಿಂದಿನ ತುಳು ಸಂಪ್ರದಾಯವನ್ನು ಉಳಿಸುವಲ್ಲಿ ಅಕಾಡೆಮಿ ಕಾರ್ಯಕ್ಕೆ ದೇವರ ಆಶೀರ್ವಾದ ಸದಾ ಇದೆ ಎಂದರು ಮತ್ತು ತುಳು ಜನರ ಎಲ್ಲಾ ರೋಗ ರುಜಿನಗಳು ದೂರವಾಗಲಿ ಎಂದರು.
ಬಳಿಕ ರಂಗಭೂಮಿ ಕಲಾವಿದರಾದ ಶ್ರೀ ರಾಮಕೃಷ್ಣ ಕಡoಬಾರ್ ಮಾತನಾಡುತ್ತ ಹಿಂದಿನ ಕಾಲದಲ್ಲಿ ಎಷ್ಟೇ ಸಿರಿವಂತ ರಾದರೂ ಬಡವರಾದರೂ ಆಟಿ ತಿಂಗಳಲ್ಲಿ ಕಷ್ಟ ಅನುಭವಿಸುತ್ತಿದ್ದರು, ತುಳು ರಸಭರಿತ ಭಾಷೆ, ನಮಗೆ ಇದು ಭಾಷೆ ಮಾತ್ರ ಅಲ್ಲ ನಮ್ಮ ಬದುಕು, ತುಳು ಭಾಷೆಗೆ ರಾಜಶ್ರಯ ಅಗತ್ಯ ಇಲ್ಲ,ಯಾಕಂದ್ರೆ ಇದಕ್ಕೆ ಹೃದಯಾಶ್ರಯ ಇದೆ, ತುಳು ಸಂಸ್ಕೃತಿ ಯನ್ನು ಇನ್ನಷ್ಟು ಬೆಳೆಸುವ ಎಂದರು. ಆಟಿ ತಿಂಗಳಲ್ಲಿ ಎಲ್ಲಾ ಧರ್ಮದ ಭಾಂದವರು ಸೇರಿ ಹಂಚಿ ತಿನ್ನುವ ಸಂಪ್ರದಾಯ ಬಹಳ ಹಿಂದಿನಿಂದಲೂ ಇದೆ ಎಂದರು. ತುಳು ಅಕಾಡೆಮಿ ಮಾಜಿ ಅಧ್ಯಕ್ಷರಾದ ಪ್ರಸ್ತುತ ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಶ್ರೀ ಉಮೇಶ್ ಸಾಲಿಯಾನ್ ಮಾತನಾಡಿ ಆಟಿ ತಿಂಗಳು ತಿನ್ನುವ ವಿಶೇಷ ತಿನಸುಗಳು ನಮ್ಮ ಆರೋಗ್ಯವನ್ನು ಹೆಚ್ಚಿಸುತ್ತವೆ ಎಂದರು ತುಳು ಅಕಾಡೆಮಿ ಇನ್ನಷ್ಟು ಬೆಳೆಯಲಿ ಎಂದರು .
ಜಾತಿ, ಭೇದ, ಮತ ಧರ್ಮತೀತವಾಗಿ ಎಲ್ಲಾ ತುಳುವರನ್ನು ಒಗ್ಗೂಡಿಸುವ ಕನಸು ಹೊತ್ತ ಅಕಾಡೆಮಿ ಅದರಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು. ಗಣ್ಯರಾದ ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಯಂತಿ ಕೆ,ಅಬ್ದುಲ್ ರಝಕ್ ಚಿಪ್ಪಾರ್, ಡಾ. ಹರೀಶ್ ಬೋಟ್ಟಾರಿ, ಸುಕುಮಾರ ಯು., ಬಾಬು ಪಾಚಿಲಂಪಾರೆ, ಮೋನಪ್ಪ ಶೆಟ್ಟಿ ಬಾಯಾರ್, ಅಶೋಕ್ ಎಮ್. ಸಿ. ಲಾಲ್ ಭಾಗ್, ಶ್ರೀಮತಿ ಮೀನಾಕ್ಷಿ ಬೊಡ್ಡೋಡಿ, ದಯಾನಂದ ಬಂಗೇರ, ಝೆಡ್ ಎ ಕಯ್ಯಾರ್, ಸಿ ಡಿ ಎಸ್ ಚೈರ್ ಪರ್ಸನ್ ಶ್ರೀಮತಿ ಚಂದ್ರಕಲಾ, ಎಮ್. ನಾ. ಚಂಬಲ್ತಿ ಮಾರ್, ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಅಧ್ಯಕ್ಷರಾದ ಶ್ರೀ ಕೆ ಆರ್ ಜಯಾನಂದರವರು ಮಾತನಾಡಿ ಕೇರಳ ತುಳು ಅಕಾಡೆಮಿ ತುಳು ಭಾಷೆ ಸಂಸ್ಕೃತಿಯನ್ನು ರಕ್ಷಿಸಲು ಕಠಿ ಭದ್ದವಾಗಿದೆ ಎಂದರು. ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರೋತ್ಸಹಿಸಿದ, ಹಾರೈಸಿದ, ಆಶೀರ್ವದಿಸಿದ ಎಲ್ಲರಿಗೂ ನಾವು ಚಿರಋಣಿ ಎಂದರು.
ಮುಂದೆಯೂ ನಿಮ್ಮೆಲ್ಲರ ಪ್ರೋತ್ಸಾಹ ಸಹಕಾರದಿಂದ ಅಕಾಡೆಮಿ ವತಿಯಿಂದ ಇನ್ನಷ್ಟು ತುಳು ಕಾರ್ಯಕ್ರಮವನ್ನು ಸಂಘಟಿಸುವ ಭರವಸೆ ಯನ್ನು ನೀಡಿದರು.ಸಮಾರಂಭದಲ್ಲಿ ತುಳುನಾಡಿನ ಸಾಧಕರಾದ ಶ್ರೀ ಈಶ್ವರ್ ಮಲ್ಪೆ, ಶ್ರೀ ಪಿ. ಆರ್. ಶೆಟ್ಟಿ, ಶ್ರೀ ಕೌಡೂರ್ ಮಾರಪ್ಪ ಭಂಡಾರಿ, ಶ್ರೀ ರಮೇಶ್ ಶೆಟ್ಟಿ ಬಾಯಾರ್, ಶ್ರೀ ಸುರೇಂದ್ರ ಕೋಟ್ಯಾನ್, ಶ್ರೀಮತಿ ಕಾವ್ಯಶ್ರೀ ಪೂಜಾರಿ, ಶ್ರೀ ಗಹನ್ ಕೆ.ಎಲ್. ರವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಶ್ರೀ ಈಶ್ವರ ಮಲ್ಪೆ ಮಾತನಾಡಿ ತುಳುವರಾದ ನಾವು ಎಷ್ಟೇ ಕಷ್ಟ ವಿದ್ದರೂ ಆತ್ಮಹತ್ಯೆ ಯಂಥಹ ಹೀನ ಕೃತ್ಯಕ್ಕೆ ಇಳಿಯಬಾರದು, ಹಿರಿಯರನ್ನು ಗೌರವಿಸಬೇಕು, ಒಗ್ಗಟ್ಟಾಗಿ ಸಮಾಜದ ಒಳಿತಿಗಾಗಿ ಶ್ರಮಿಸೋಣ ಎಂದರು. ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯರಾದ ಅಜಿತ್ ಎಮ್. ಸಿ.ಸ್ವಾಗತಿಸಿದರೆ, ಅಬ್ದುಲ್ಲ ಕೆ ವಂದಿಸಿದರು.ಶ್ರೀ ದೇವಿ ಪ್ರಸಾದ್ ಶೆಟ್ಟಿ ಬೆಜ್ಜ ಸುಂದರವಾಗಿ ಅಚ್ಚ ತುಳುವಿನಲ್ಲಿ ಕಾರ್ಯಕ್ರಮವನ್ನು ನಿರೂಪಿಸಿದರು