ಮರ್ಚೆಂಟ್ ಯೂತ್ ವಿಂಗ್ ಬದಿಯಡ್ಕ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಬದಿಯಡ್ಕ: ಮರ್ಚೆಂಟ್ ಯೂತ್ ವಿಂಗ್ ಬದಿಯಡ್ಕ ಘಟಕ ಸಮಿತಿಯ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ವ್ಯಾಪಾರಿ ಭವನದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಯೂತ್ ವಿಂಗ್ ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಶಾಹಿದ್ ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ನವಾಸ್ ಇ.ಕೆ. ಸಭೆಯನ್ನು ಉದ್ಘಾಟಿಸಿದರು. ಕೆವಿವಿಎಸ್ ಬದಿಯಡ್ಕ ಘಟಕದ ಉಪಾಧ್ಯಕ್ಷ ಹಮೀದ್ ಬಾರಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಘಟಕದ ಪ್ರಧಾನ ಕಾರ್ಯದರ್ಶಿ ರವಿ ನವಶಕ್ತಿ, ಖಜಾಂಚಿ ಜ್ಞಾನ ದೇವ ಶೆಣೈ ಹಾಗೂ ಕಾರ್ಯದರ್ಶಿ ಉದಯ ಶಂಕರ್ ಮಾತನಾಡಿದರು. ದುರ್ಗಾ ಪ್ರಸಾದ್ ಬಿ. ಸ್ವಾಗತಿಸಿ, ಅಹ್ಮದ್ ಸಫ್ವಾನ್ ವಂದಿಸಿದರು.

ಅಧ್ಯಕ್ಷರು: ಮೊಹಮ್ಮದ್ ಶಾಹಿದ್

ಕಾರ್ಯದರ್ಶಿ: ದುರ್ಗಾ ಪ್ರಸಾದ್ ಬಿ.


ಖಜಾಂಚಿ: ಅಹ್ಮದ್ ಸಫ್ವಾನ್

ನೂತನ ಪದಾಧಿಕಾರಿಗಳು:

  • ಅಧ್ಯಕ್ಷರು: ಮೊಹಮ್ಮದ್ ಶಾಹಿದ್
  • ಕಾರ್ಯದರ್ಶಿ: ದುರ್ಗಾ ಪ್ರಸಾದ್ ಬಿ.
  • ಖಜಾಂಚಿ: ಅಹ್ಮದ್ ಸಫ್ವಾನ್

SHARE
Loading spinner

Leave a Reply

Your email address will not be published. Required fields are marked *

error: Content is protected !!