ಬೀದಿನಾಯಿ ಕಡಿತಕ್ಕೆ ಲಸಿಕೆ ಪಡೆಯದ ವ್ಯಕ್ತಿ ಸಾವು: ಹುಚ್ಚುನಾಯಿ ರೋಗದ ಶಂಕೆ

ಕಾಸರಗೋಡು . . ಹೊಸದುರ್ಗದ ಉದಯನಗರ ನಿವಾಸಿ ಅಶೋಕ (55) ಅವರು ಹುಚ್ಚುನಾಯಿ ರೋಗದ ಶಂಕೆಯಿಂದ ಸಾವನ್ನಪ್ಪಿದ್ದಾರೆ. ವಾಹನಗಳಿಗೆ ಪೇಂಟ್ ಕೆಲಸ ಮಾಡುತ್ತಿದ್ದ ಇವರಿಗೆ ಮೂರು ತಿಂಗಳ ಹಿಂದೆ ಚಿತ್ತಾರಿಯಲ್ಲಿ ಕೆಲಸ ಮಾಡುವಾಗ ಬೀದಿ ನಾಯಿ ಕಚ್ಚಿತ್ತು ಎನ್ನಲಾಗಿದ್ದು, ಅವರು ಪ್ರತಿರೋಧ ಚುಚ್ಚುಮದ್ದು ಪಡೆದಿರಲಿಲ್ಲ.

​ ಈ ಹಿನ್ನೆಲೆಯಲ್ಲಿ ರೋಗಲಕ್ಷಣ ಕಂಡುಬಂದದ್ದರಿಂದ ಕಾಞಂಗಾಡ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸೋಮವಾರ ಕಾಞಂಗಾಡ್ ಜಿಲ್ಲಾಸ್ಪತ್ರೆ ಹಾಗೂ ಪರಿವಾರಂ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ,

ಅಂದೇ ರಾತ್ರಿ ಅವರು ನಿಧನರಾದರು. ರೋಗ ಖಚಿತಪಡಿಸಲು ಮಾದರಿಯನ್ನು ವೈರಾಲಜಿ ಲ್ಯಾಬ್‌ಗೆ ಕಳುಹಿಸಲಾಗಿದೆ. ಮೃತರ ಅಂತ್ಯಕ್ರಿಯೆ ಹಾಗೂ ಆರೋಗ್ಯ ಇಲಾಖೆಯ ಪರಿಶೀಲನೆ ಮುಂದುವರಿದಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!