ವಿಟ್ಲ: ನೀಟ್ ಹೋರಾಟವನ್ನು ಧಾರ್ಮಿಕವಾಗಿ ತಿರುಚಿ, ಸಮುದಾಯಗಳ ನಡುವೆ ವೈಮನಸ್ಸು ಉಂಟುಮಾಡುವ ಹಾಗೂ ಸಾರ್ವಜನಿಕ ನೆಮ್ಮದಿಗೆ ಭಂಗ ತರುವಂತಹ ಅವಹೇಳನಕಾರಿ ಬರಹವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಆರೋಪದ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಪ್ರಕರಣದ ಪಿರ್ಯಾದಿದಾರರ ದೂರಿನಂತೆ, ಸದ್ರಿಯವರು KFC KHANDIGA ಎಂಬ ವಾಟ್ಸಾಪ್ ಗ್ರೂಪ್ ನಲ್ಲಿ ಸದಸ್ಯರಾಗಿದ್ದು, ದಿನಾಂಕ:23.07.2026 ರಂದು ಸದ್ರಿ ಗ್ರೂಪ್ ನಲ್ಲಿ ಬಂದ ಸ್ಕ್ರೀನ್ ಶಾಟ್ ವೊಂದನ್ನು ನೋಡಿದಾಗ ಅದರಲ್ಲಿ ಸಮುದಾಯಗಳ ನಡುವೆ ವೈಮನಸ್ಸು ಮೂಡುವಂತೆ ಹಾಗೂ ಸಾರ್ವಜನಿಕರಿಗೆ ಸಾರ್ವಜನಿಕ ನೆಮ್ಮದಿಗೆ ಭಂಗವುಟಾಗುವಂತಹ ಬರಹಗಳಿದ್ದು, ಸದ್ರಿ ಸಂದೇಶವನ್ನು ಪರಿಶೀಲಿಸಲಾಗಿ ಬಂಟ್ವಾಳ ಕೇಪು ಭರತ್ (36) ಎಂಬಾತನು ಸದ್ರಿ ಬರಹಗಳನ್ನು ತನ್ನ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿರುವುದಾಗಿ ತಿಳಿದುಬಂದಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 160/2026 ಕಲಂ: 197(1)(a), 197(1)(c), 353(2) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ, ಆರೋಪಿತ ಭರತ್ ಎಂಬಾತನನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸಲಾಗುತ್ತಿದೆ



