ಇಚ್ಲಂಗೋಡು ಪಚ್ಚಂಬಳ ಮಖಾಂ ಉರೂಸ್ ಗೆ ಧ್ವಜಾರೋಹಣ; ರಾತ್ರಿ ಧಾರ್ಮಿಕ ಪ್ರವಚನ

ಪಚ್ಚಂಬಳ : ಇಚ್ಚಿಲಂಗೋಡು ಪಚ್ಚಂಬಳ ಬಾವ ಫಕೀರ್ ಮಖಾಂ ಉರೂಸ್‌ಗೆ ಚಾಲನೆ ನೀಡುವ ಮೂಲಕ ಸಂಜೆ 4.15ಕ್ಕೆ ಇಚ್ಚಿಲಂಗೋಡು ಮಾಲಿಕ್ ದೀನಾರ್ ಜುಮಾ ಮಸೀದಿ ಅಧ್ಯಕ್ಷ ಅನ್‌ಸಾರ್ ಶೆರೂಲ್ ಧ್ವಜಾರೋಹಣ ನೆರವೇರಿಸಿದರು.

ರಾತ್ರಿ 8 ಗಂಟೆಗೆ ಕುಂಬೋಳ್ ಕೆ.ಎಸ್. ಜಾಫರ್ ಸಾದಿಕ್ ತಂಙಳ್ ಉರೂಸ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಸಯ್ಯಿದ್ ಜಲಾಲುದ್ದೀನ್ ಸಅದಿ ಅಲ್ ಬುಖಾರಿ ಅಧ್ಯಕ್ಷತೆ ವಹಿಸಲಿದ್ದಾರೆ.

ಇಸ್ಮಾಯಿಲ್ ಸಖಾಫಿ ಮಖಾಂ ಝಿಯಾರತ್‌ಗೆ ನೇತೃತ್ವ ನೀಡಿದರು. ಜಾಫರ್ ಬುಸ್ತಾನಿ ಕುಣಿಯ ಸ್ವಾಗತ ಭಾಷಣ ಮಾಡಲಿದ್ದಾರೆ. ಮುಹಮ್ಮದ್ ತಾಹಿರ್ ಸಖಾಫಿ ಅಲ್‌ವಾರಿಸ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಎ.ಕೆ.ಎಂ. ಅಶ್ರಫ್ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಧ್ವಜಾರೋಹಣ ಸಮಾರಂಭದಲ್ಲಿ ಇಚ್ಚಿಲಂಗೋಡು ಮಾಲಿಕ್ ದೀನಾರ್ ಖತೀಬ್ ಜಾಫರ್ ಬುಸ್ತಾನಿ ಕುಣಿಯ, ಉರೂಸ್ ಸಮಿತಿ ಕನ್ವೀನರ್ ಅಜೀಜ್ ಟಿಂಬರ್, ಇಚ್ಚಿಲಂಕೋಡ್ ಮಾಲಿಕ್ ದೀನಾರ್ ಜಮಾಅತ್ ಕಾರ್ಯದರ್ಶಿ ಮುಹಮ್ಮದ್ ಪುಣೆ, ಉಪಾಧ್ಯಕ್ಷ ಮೊಯ್ದೀನ್ ಕುಂಜಿ ಹಾಜಿ ಪಳ್ಳಿಕ್ಕುನ್ನು, ಖಜಾಂಚಿ ಮಜೀದ್ ಪಚ್ಚಂಪಳ, ಪ್ರಚಾರ ಸಮಿತಿ ಕನ್ವೀನರ್ ಜಸೀಲ್ ಹುಬ್ಬಳ್ಳಿ, ಹಸನ್ ಇಚ್ಚಿಲಂಕೋಡ್, ಅಶ್ರಫ್ ಸಿ.ಎಂ.ಪಿ., ಅಬ್ದುಲ್ ಸತ್ತಾರ್ ಮದನಿ, ತಾಹಿರ್ ಸಖಾಫಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!