ದಿವಂಗತ ನ್ಯಾಯಾಧೀಶರ ಮನೆಯಲ್ಲಿ 1 ಲಕ್ಷ ರೂ. ನಗದು, ಚಿನ್ನಾಭರಣ ದೋಚಿದ ಕಳ್ಳರು

ಮಂಜೇಶ್ವರ: ತೂಮಿನಾಡು ರಾಷ್ಟ್ರೀಯ ಹೆದ್ದಾರಿ ಬದಿಯ ನ್ಯೂ ಭಾರತ್ ಆಟೋ ವರ್ಕ್ಸ್ ಹಿಂಭಾಗದಲ್ಲಿರುವ ದಿವಂಗತ ನ್ಯಾಯಾಧೀಶ ಯೋಗಿಂದ್ರ ಆಚಾರ್ಯ ಅವರ ಮನೆಯಲ್ಲಿ ಕಳವು ನಡೆದಿರುವ ಘಟನೆ ಭಾನುವಾರ ಸಂಜೆ ಬೆಳಕಿಗೆ ಬಂದಿದೆ.

​ಯೋಗಿಂದ್ರ ಆಚಾರ್ಯ ಅವರ ಪತ್ನಿ ಜಲಜಾಕ್ಷಿ ಅವರು ಶನಿವಾರ ಸಂಜೆ ತಲಪಾಡಿಯಲ್ಲಿರುವ ತಮ್ಮ ಸಹೋದರನ ಮನೆಗೆ ತೆರಳಿದ್ದರು. ಭಾನುವಾರ ಸಂಜೆ ವಾಪಸ್ ಮನೆಗೆ ಮರಳಿದಾಗ ಮನೆಯ ಮುಂಬಾಗಿಲು ಮುರಿದಿರುವುದು ಕಂಡುಬಂದಿದೆ.

​ತಕ್ಷಣ ಒಳಗೆ ಹೋಗಿ ಪರಿಶೀಲಿಸಿದಾಗ ಕಪಾಟಿನಲ್ಲಿದ್ದ ಬಟ್ಟೆಬರೆಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಕಪಾಟಿನಲ್ಲಿ ಇರಿಸಲಾಗಿದ್ದ 1 ಲಕ್ಷ ರೂಪಾಯಿ ನಗದು ಹಾಗೂ ಒಂದು ಚಿನ್ನದ ಉಂಗುರ ಕಳವಾಗಿರುವುದು ಗಮನಕ್ಕೆ ಬಂದಿದೆ.

​ಸ್ಥಳೀಯ ನಿವಾಸಿ ಇಲ್ಯಾಸ್ ತೂಮಿನಾಡು ಅವರು ನೀಡಿದ ಮಾಹಿತಿಯ ಮೇರೆಗೆ ಮಂಜೇಶ್ವರ ಪೊಲೀಸ್ ಠಾಣೆಯ ಎಸ್ಸೈ ಜಿಯೋ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಾಥಮಿಕ ತನಿಖೆ ಕೈಗೊಂಡಿದೆ.

​ಇತ್ತೀಚಿನ ದಿನಗಳಲ್ಲಿ ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳವು ನಡೆಸುವ ಪ್ರಕರಣಗಳು ವ್ಯಾಪಕವಾಗಿ ನಡೆಯುತ್ತಿರುವುದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!