10 ವರ್ಷಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ್ದ ಕೊಲೆ ಆರೋಪಿ ದೆಹಲಿಯಲ್ಲಿ ಅರೆಸ್ಟ್!

ಕಾಸರಗೋಡು : ​2010ರ ಏಪ್ರಿಲ್ 20ರಂದು ಕಾಸರಗೋಡಿನ ಇರಿಕ್ಕೂರ್‌ನಲ್ಲಿ ನಡೆದಿದ್ದ ಕುಞ್ಹಾಮಿನಾ (60) ಎಂಬುವವರ ಭೀಕರ ಕೊಲೆ ಹಾಗೂ ಕಳವು ಪ್ರಕರಣದ ಪ್ರಮುಖ ಆರೋಪಿ ಅಬ್ಬಾಸ್ ಅಲಿ (31) ಎಂಬಾತನನ್ನು ಬರೋಬ್ಬರಿ 10 ವರ್ಷಗಳ ಬಳಿಕ ದೆಹಲಿಯಲ್ಲಿ ಕಾಸರಗೋಡು-ಕಣ್ಣೂರು ಕ್ರೈಮ್ ಬ್ರಾಂಚ್ ಪೊಲೀಸರು ಸೆರೆಹಿಡಿದಿದ್ದಾರೆ.

​ಘಟನೆಯ ನಂತರ ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದ ಅಬ್ಬಾಸ್ ಅಲಿ, ಮೊಬೈಲ್ ಬಳಸದೆ ಪೂಜಾ ಎಂಬ ಪ್ರಿಯೆಯೊಂದಿಗೆ ವಾಸವಾಗಿದ್ದನು. ಈತನ ಬಂಧನಕ್ಕಾಗಿ ಎಸ್‌ಪಿ ಕೆ.ವಿ. ವೇಣುಗೋಪಾಲ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.

ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇತರ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಪ್ರಮುಖ ಆರೋಪಿಯ ಬಂಧನದೊಂದಿಗೆ ಹತ್ತು ವರ್ಷಗಳ ಹಳೆಯ ಕಗ್ಗಂಟಿಗೆ ಮಹತ್ವದ ತಿರುವು ಸಿಕ್ಕಂತಾಗಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!