ಉಕ್ಕಿನಡ್ಕ ಮೆಡಿಕಲ್ ಕಾಲೇಜಿನ ಒ.ಪಿ ಸೇವೆ ಜನರಲ್ ಆಸ್ಪತ್ರೆಗೆ ಸ್ಥಳಾಂತರ

ಕಾಸರಗೋಡು : ಉಕ್ಕಿನಡ್ಕ ಮೆಡಿಕಲ್ ಕಾಲೇಜು ಆಸ್ಪತ್ರೆಯ ಹೊರರೋಗಿ (ಒ.ಪಿ) ಸೇವೆಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಈ ಕುರಿತು ಪ್ರಾಾಂಶುಪಾಲರು ಕನ್ನಡ ಹಾಗೂ ಮಲಯಾಳದ ನೋಟೀಸು ಅಂಟಿಸಿದ್ದಾರೆ.

ಮೆಡಿಕಲ್ ಕಾಲೇಜಿನ ಒ.ಪಿ ಸೇವೆಗಳನ್ನು ಸ್ಥಳಾಂತರಿಸುವುದಿಲ್ಲ ಎಂದು ಆರೋಗ್ಯ ಸಚಿವರು ಭರವಸೆ ನೀಡಿದ್ದರೂ, ಪ್ರಸ್ತುತ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ.

​ಆದರೆ, ಈ ಸೇವೆಗಳು ಮತ್ತೆ ಯಾವಾಗ ಪುನರಾರಂಭಗೊಳ್ಳಲಿವೆ ಎಂಬ ಸ್ಪಷ್ಟ ಮಾಹಿತಿ ನೀಡದಿರುವುದು ಸಾರ್ವಜನಿಕರಲ್ಲಿ ಮತ್ತು ರೋಗಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.

ಪ್ರತಿದಿನ ಸುಮಾರು 500ಕ್ಕೂ ಅಧಿಕ ಮಂದಿ ವಿವಿಧ ವಿಭಾಗಗಳ ವೈದ್ಯರ ಚಿಕಿತ್ಸೆ ಪಡೆಯುತ್ತಿದ್ದ ಈ ಕೇಂದ್ರದಲ್ಲಿ, ಈಗ ಔಷಧಿಗಳ ಲಭ್ಯತೆ ಕಡಿಮೆಯಾಗಲಿದೆ ಹಾಗೂ ಒ.ಪಿ ಸೇವೆಗಳು ಸ್ಥೆಳಾಂತರಗೊಳ್ಳಲಿವೆ ಎಂಬ ವ್ಯಾಪಕ ಪ್ರಚಾರದಿಂದ ರೋಗಿಗಳು ಪರದಾಡುವಂತಾಗಿದೆ.

ಎಂಬಿಬಿಎಸ್ ಎರಡನೇ ಬ್ಯಾಚ್ ಆರಂಭದ ಸೌಕರ್ಯಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದ್ದರೂ, ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಸರಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!