
ಉಪ್ಪಳ: ಉಪ್ಪಳ ಕ್ಷೇತ್ರ ಸಂಯುಕ್ತ ಜಮಾಅತ್ ಖಾಝಿಯಾಗಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಕೊಯ್ಯೋಡ್ ಪಿ.ಪಿ. ಉಮರ್ ಮುಸ್ಲಿಯಾರ್ ಅವರು ಗಣ್ಯರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು.



ಗುರುವಾರ ಬೆಳಗ್ಗೆ 10 ಗಂಟೆಗೆ ಉಪ್ಪಳ ಅಹ್ಲೇ ಸುನ್ನತ್ ಹನಫಿ ಜಾಮಿಅ ಮಸೀದಿ ಆವರಣದ ಕೆ. ಆಲಿಕುಟ್ಟಿ ಉಸ್ತಾದ್ ನಗರದಲ್ಲಿ ನಡೆದ ಸಮಾರಂಭವನ್ನು ಪಾಣಕ್ಕಾಡ್ ಸಯ್ಯಿದ್ ಅಬ್ಬಾಸ್ ಅಲಿ ಶಿಹಾಬ್ ತಂಙಳ್ ಉದ್ಘಾಟಿಸಿದರು.
ಸಂಯುಕ್ತ ಜಮಾಅತ್ ಅಧ್ಯಕ್ಷ ಸಿರಾಜುದ್ದೀನ್ ಫೈಝಿ ಚೇರಾಲ್ ಅಧ್ಯಕ್ಷತೆ ವಹಿಸಿದ್ದರು. ಎಂ.ಎಸ್. ತಂಙಳ್ ಮದನಿ ಓಲಮುಂಡ ಪ್ರಾರ್ಥನೆ ನೆರವೇರಿಸಿದರು.

ಸಂಯುಕ್ತ ಜಮಾಅತ್ ರಕ್ಷಾಧಿಕಾರಿ ಸಯ್ಯಿದ್ ಕೆ.ಎಸ್. ಅಲಿ ತಂಙಳ್ ಅವರು ಖಾಝಿಗೆ ಪೇಟ ತೊಡಿಸಿದರೆ, ಅತ್ತಾವುಲ್ಲಾ ತಂಙಳ್ ಉದ್ಯಾವರ ಅವರು ಸ್ಥಾನವಸ್ತ್ರ ತೊಡಿಸಿದರು. ಅಬ್ದುಲ್ ಮಜೀದ್ ದಾರಿಮಿ ಖಾಝಿಯನ್ನು ಪರಿಚಯಿಸಿದರು.


ಕಾರ್ಯಕ್ರಮದಲ್ಲಿ ಶಾಸಕರಾದ ಎ.ಕೆ.ಎಂ. ಅಶ್ರಫ್, ಕಲ್ಲಟ್ರ ಮಾಯಿನ್, ಯು.ಕೆ. ಸೈಫುಲ್ಲಾ ತಂಙಳ್, ಅಬ್ದುಸ್ಸಲಾಂ ದಾರಿಮಿ ಆಲಂಪಾಡಿ, ಮಜೀದ್ ಬಾಖವಿ, ಪಿ.ಎಸ್. ಇಬ್ರಾಹಿಂ ಫೈಝಿ, ಮಾಜಿ ಶಾಸಕ ಸಿ.ಟಿ. ಅಹಮದಲಿ, ಎ. ಅಬ್ದುಲ್ ರಹಿಮಾನ್ ಹಾಗೂ ಹಾದಿ ತಂಙಳ್ ಮೊಗ್ರಾಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

