ನಿಟ್ಟೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2026-27 ಸಂಭ್ರಮದಿಂದ ಸಂಪನ್ನ

ಡಾ. ಎನ್. ಎಸ್. ಎ. ಎಂ. ಪದವಿ ಪೂರ್ವ ಕಾಲೇಜು ನಿಟ್ಟೆ ( ಪ್ರೌಢ ಶಾಲಾವಿಭಾಗ) ಇವರ ಸಹಯೋಗದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2026-27 ಅತ್ಯಂತ ಸಂಭ್ರಮದಿಂದ ಸಂಪನ್ನಗೊಂಡಿತು.

ಸಮಾರಂಭದ ಉದ್ಘಾಟನೆಯನ್ನು ಕಾರ್ಕಳದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಮತಿ ಗಿರಿಜಾ ಇವರು ನೆರವೇರಿಸಿ ಶುಭ ಹಾರೈಸಿದರು.
ಸಮಾರಂಭದ ವೇದಿಕೆಯಲ್ಲಿ ಉಡುಪಿ ಜಿಲ್ಲಾ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ಕಾರ್ಕಳ ತಾಲೂಕು ಸಾಹಿತ್ಯ ಸಂಘದ ಅಧ್ಯಕ್ಷ ಶ್ರೀ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶ್ರೀ ಮತಿ ಇಂದಿರಾ, ಡಾ. ಎನ್. ಎಸ್. ಎ. ಎಂ. ಪ. ಪೂ. ಕಾಲೇಜಿನ ಆಡಳಿತಾಧಿಕಾರಿ ಡಾ. ಪ್ರಕಾಶ್ ಶೆನೈ, ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶ್ರೀ ಮತಿ ರಾಧಾ ಪ್ರಭು ನಿಟ್ಟೆ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀ ಶಿವಾನಂದ ಕುಂಟಾಡಿ ಉಪಸ್ಥಿತರಿದ್ದು ಶುಭ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.


ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಸಂಸತ್ತಿನ ನಾಯಕಿ ಕು. ಯಶಸ್ವಿ ವೈ. ಆಚಾರ್ಯ, ಉಪನಾಯಕ ವಿಜೇಶ್ ಆಚಾರ್ಯಹಾಗೂ ಶಿಕ್ಷಣ ಮಂತ್ರಿ ಕು ll ಖ್ಯಾತಿ ಭಾಗವಹಿಸಿದ್ದು ವಿಶೇಷವಾಗಿತ್ತು.
CRP ಶಿವಾನಂದ ಅವರು ತಮ್ಮ ಪ್ರಾಸ್ತಾವಿಕ ನುಡಿಗಳೊಂದಿಗೆ ಸರ್ವರನ್ನು ಸ್ವಾಗತಿಸಿದರು.
ಅತಿಥೇಯ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿಯರಾದ ಕು ll ಖ್ಯಾತಿ, ಯಶಸ್ವಿ ಆಚಾರ್ಯ,ಪೃಥ್ವಿ,ದೀಕ್ಷಾ ಮೂಲ್ಯ, ದೀಕ್ಷಾ ದೇವಾಡಿಗ ದೀಕ್ಷಾ ಎಸ್. ಮೂಲ್ಯ ಇವರು ಪ್ರಾರ್ಥನೆಗೈದರು.

ಕನ್ನಡ ಭಾಷಾ ಶಿಕ್ಷಕಿ ಶ್ರೀ ಮತಿ ಸುರೇಖಾ ಶೆಟ್ಟಿ ಧನ್ಯವಾದ ಸಮರ್ಪಣೆ ಮಾಡಿ,ಪ್ರೌಢ ಶಾಲಾ ಹಿರಿಯ ಶಿಕ್ಷಕ ಶ್ರೀ ಚಂದ್ರ ನಾಯ್ಕ್ ಟಿ, ಕಾರ್ಯಕ್ರಮ ನಿರೂಪಣೆ ಮಾಡಿದರು.

ನಿಟ್ಟೆ ಕ್ಲಸ್ಟರ್ ನ 17 ಶಾಲಾ ಕಾಲೇಜುಗಳಿಂದ ಸುಮಾರು 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 50 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ತೀರ್ಪುಗಾರ ಶಿಕ್ಷಕರು ಹಾಗೂ crp ಗಳು ಭಾಗವಹಿಸಿದ್ದರು.ವಿವಿಧ ಸ್ಪರ್ಧೆಗಳಾದ ಆಕರ್ಷಣೀಯ ಜಾನಪದ ನೃತ್ಯ, ಅಭಿನಯ ಗೀತೆ, ಭರತ ನಾಟ್ಯ, ಕ್ಲೇ ಮಾಡಲ್, ರಂಗೋಲಿ, ಚಿತ್ರ ಕಲೆ, ಕಂಠ ಪಾಠ, ಭಾಷಣ, ಮಿಮಿಕ್ರಿ ಇನ್ನೂ ಹಲವಾರು ಸ್ಪರ್ಧೆಗಳು ಜರುಗಿದವು.

SHARE
Loading spinner

Leave a Reply

Your email address will not be published. Required fields are marked *

error: Content is protected !!