ಟಿ.ಎಂ. ಶಾಹಿದ್ ತೆಕ್ಕಿಲ್ ಅವರ ‘ತೆಕ್ಕಿಲ್ ಮೀಡಿಯಾ’ ವೆಬ್‌ಸೈಟ್ ಲೋಕಾರ್ಪಣೆ

ಮಂಗಳೂರು: ನಗರದ ಪುರಭವನದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಅಧೀನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವ ಸ್ಥಾನಮಾನ) ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಾಹಿದ್ ತೆಕ್ಕಿಲ್ ಅವರ ನೂತನ ವೆಬ್‌ಸೈಟ್ ‘ತೆಕ್ಕಿಲ್ ಮೀಡಿಯಾ’ವನ್ನು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಐವನ್ ಡಿಸೋಜಾ, ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣ ಹಾಗೂ ವೆಬ್‌ಸೈಟ್‌ಗಳು ಅತ್ಯಂತ ಅಗತ್ಯವಾಗಿವೆ. ಕ್ಷಣಾರ್ಧದಲ್ಲಿ ಸುದ್ದಿ, ಮಾಹಿತಿ ಹಾಗೂ ವಿಚಾರಗಳನ್ನು ಜನರಿಗೆ ತಲುಪಿಸಲು ಇಂತಹ ವೇದಿಕೆಗಳು ಸಹಕಾರಿಯಾಗಿವೆ. ಸಾಮಾಜಿಕ ಜಾಲತಾಣಗಳ ಒಳಿತು ಮತ್ತು ಕೆಡುಕುಗಳ ಕುರಿತು ಅರಿವು ಹೊಂದುವ ಅಗತ್ಯವಿದ್ದು, ‘ತೆಕ್ಕಿಲ್ ಮೀಡಿಯಾ’ ವೆಬ್‌ಸೈಟ್ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

‘ತೆಕ್ಕಿಲ್ ಮೀಡಿಯಾ.ಇನ್’ ವೆಬ್‌ಸೈಟ್‌ನಲ್ಲಿ ಟಿ.ಎಂ. ಶಾಹಿದ್ ತೆಕ್ಕಿಲ್ ಅವರ ವೈಯಕ್ತಿಕ ಪರಿಚಯ, ಸಾಮಾಜಿಕ ಸೇವೆ, ರಾಜಕೀಯ ಹಾಗೂ ಆಡಳಿತ ಕ್ಷೇತ್ರದಲ್ಲಿನ ಕಾರ್ಯಚಟುವಟಿಕೆಗಳ ಕುರಿತ ಸಮಗ್ರ ಮಾಹಿತಿಯನ್ನು ಒದಗಿಸಲಾಗಿದೆ.

ಕಾರ್ಯಕ್ರಮದಲ್ಲಿ ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫಾ, ಕಿರಣ್ ಬುಡ್ಲೆಗುತ್ತು, ಸಂಶುದ್ದೀನ್ ಎಸ್.ಎ., ಪಿ.ಎ. ಮುಹಮ್ಮದ್, ನ್ಯಾಯವಾದಿ ಆದಿಲ್ ಅಲಿ ಹಾಗೂ ಶೆಝಿನ್ ತೆಕ್ಕಿಲ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!