ಪುತ್ತೂರು ರೇಂಜ್ ಮುಸಾಬಕ 2K26: ಬಪ್ಪಳಿಗೆ ನೂರುಲ್ ಹುದಾ ಮದ್ರಸಕ್ಕೆ ಚಾಂಪಿಯನ್ ಪಟ್ಟ

ಪುತ್ತೂರು: ಪುತ್ತೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ವತಿಯಿಂದ ಆಯೋಜಿಸಲಾಗಿದ್ದ 18 ನೇ ರೇಂಜ್ ಮಟ್ಟದ ಮುಸಾಬಕ 2K26 ಕಾರ್ಯಕ್ರಮವು ನವೆಂಬರ್ 08 ಭಾನುವಾರ ಪುತ್ತೂರು ತಾಲೂಕಿನ ಕೊಡಿಬಾಂಡಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಭಾನುವಾರ ಬೆಳಿಗ್ಗೆ ರೇಂಜ್ ಅಧ್ಯಕ್ಷರಾದ ಬಹು. ಅಬ್ದುಲ್ ಬಷೀರ್ ದಾರಿಮಿ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಮುಸಾಬಕ ಸಮೀತಿ ಚೇರ್ಮಾನ್ ಉಮರ್ ಹಾಜಿ ಕೋಡಿoಬಾಡಿ ಧ್ವಜಾರೋಹಣ ನೆರವೇರಿಸಿದರು. ಪುತ್ತೂರು ರೇಂಜ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ರಹ್ಮಾನಿ ಸ್ವಾಗತ ಭಾಷಣ ಮಾಡಿದರು. ಸ್ಥಳೀಯ ಖತೀಬ್ ಬಹು. ಅಬ್ದುಲ್ ನಾಸಿರ್ ಫೈಝಿ ಉಪಸ್ಥಿತರಿದ್ದರು.

ಪುತ್ತೂರು ರೇಂಜ್ ಅಧೀನದಲ್ಲಿರುವ ಒಟ್ಟು 26 ಮದ್ರಸಗಳಿಂದ ಸುಮಾರು 496 ವಿದ್ಯಾರ್ಥಿಗಳು ವಿವಿಧ ವಿಭಾಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಧಾರ್ಮಿಕ, ಸಾಹಿತ್ಯ ಹಾಗೂ ಕಲಾ ಕ್ಷೇತ್ರಗಳಿಗೆ ಸಂಬಂಧಿಸಿದ ವಿವಿಧ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆ, ಜ್ಞಾನ ಮತ್ತು ಸಾಮರ್ಥ್ಯವನ್ನು ಹೊರತರುವ ವೇದಿಕೆಯಾಗಿ ಮೂಡಿಬಂದವು.

ತೀವ್ರ ಪೈಪೋಟಿಯಿಂದ ಕೂಡಿದ್ದ ಈ ವರ್ಷದ ಮುಸಾಬಕದಲ್ಲಿ ಬಪ್ಪಳಿಗೆ ನೂರುಲ್ ಹುದಾ ಮದ್ರಸವು ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರೆ, ಪಡೀಲ್ ಮುಈನುಲ್ ಇಸ್ಲಾಂ ಮದ್ರಸವು ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಪರ್ಲಡ್ಕ ಹಯಾತುಲ್ ಇಸ್ಲಾಂ ಮದ್ರಸ ತೃತೀಯ ಸ್ಥಾನ

ಕಾರ್ಯಕ್ರಮದಲ್ಲಿ ರೇಂಜ್ ಸಮಿತಿಯ ಪದಾಧಿಕಾರಿಗಳು, ವಿವಿಧ ಮದ್ರಸಗಳ ಅಧ್ಯಾಪಕರು, ಸಂಘಟಕರು, ತೀರ್ಪುಗಾರರು, ಸ್ವಯಂಸೇವಕರು ಹಾಗೂ ಹಿತೈಷಿಗಳು ಶ್ರಮಿಸಿದರು. ದೂರದ ಊರುಗಳಿಂದ ಆಗಮಿಸಿದ ನೂರಾರು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮುಸಾಬಕ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೇಂಜ್ ಸ್ವಾಗತ ಸಮೀತಿ ಚೇರ್ಮಾನ್ ಜನಾಬ್ ಉಮರ್ ಹಾಜಿ ಕೊಡಿಬಾoಡಿ ವಹಿಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸ್ಥಳೀಯ ಸ್ವಾಗತ ಸಮೀತಿ ಚೇರ್ಮನ್ ಹುಸೈನ್ ಹಾಜಿ ಕೆ.ಬಿ.ಕೆ ಕೋಡಿoಬಾಡಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಲೌಲಿ ಹಮೀದ್ ಹಾಜಿ ಬಪ್ಪಳಿಗೆ, ಬಶೀರ್ ಹಾಜಿ ದಾರಂದಕುಕ್ಕು,ಎಲ್.ಟಿ ರಝಾಕ್ ಹಾಜಿ,ಇಕ್ಬಾಲ್ ಕೋಡಿoಬಾಡಿ, ಶಬೀರ್ ಸರ್ಗ ಕೋಡಿಂಬಾಡಿ,ಅಬ್ದುಲ್ ರಹಿಮಾನ್ ಕೋಡಿoಬಾಡಿ ಮತ್ತು ಹಲವಾರು ಮಂದಿ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!