ಮಿಸೆಸ್ ಇಂಡಿಯಾ ವರ್ಲ್ಡ್‌ವೈಡ್ ಸ್ಪರ್ಧೆಯಲ್ಲಿ ಮಂಗಳೂರಿನ ಶ್ವೇತಾ ಕೋಟ್ಯಾನ್‌ಗೆ ಪ್ರಶಸ್ತಿ

ಮಂಗಳೂರು: ಹಾಟ್ ಮಾಂಡೆ ಮಿಸೆಸ್ ಇಂಡಿಯಾ ವರ್ಲ್ಡ್‌ವೈಡ್ ಸೀಸನ್ 15ರ ಸ್ಪರ್ಧೆಯಲ್ಲಿ ಮಂಗಳೂರಿನ ಶ್ವೇತಾ ಕೋಟ್ಯಾನ್ ಅವರು ಪ್ರತಿಷ್ಠಿತ ‘ಫೈರ್ ಎಲಿಮೆಂಟ್ ವಿನ್ನರ್ 2026 – MENA’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಒಮಾನ್ ದೇಶವನ್ನು ಪ್ರತಿನಿಧಿಸಿದ್ದ ಶ್ವೇತಾ ಅವರು, ರಾಜಸ್ಥಾನದ ನೀಮ್ರಾಣದಲ್ಲಿರುವ ಹಾಟ್ ಮಾಂಡೆ ರಾಜ್‌ಪುತನ ಪ್ಯಾಲೇಸ್‌ನಲ್ಲಿ ಅಕ್ಟೋಬರ್ 27ರಿಂದ 30ರವರೆಗೆ ನಡೆದ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ. ಮೂಲತಃ ಮಂಗಳೂರಿನವರಾದ ಶ್ವೇತಾ ಪ್ರಸ್ತುತ ಒಮಾನ್‌ನ ಮಸ್ಕತ್‌ನಲ್ಲಿ ನೆಲೆಸಿದ್ದಾರೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಮ್ಮ ಸಾಧನೆಯ ಕುರಿತು ಮಾಹಿತಿ ಹಂಚಿಕೊಂಡ ಅವರು, ಈ ಗೆಲುವು ಕೇವಲ ಪ್ರಶಸ್ತಿ ಅಥವಾ ಕಿರೀಟಕ್ಕೆ ಸೀಮಿತವಾಗಿಲ್ಲ. ಕುಟುಂಬ, ವೃತ್ತಿ ಹಾಗೂ ವೈಯಕ್ತಿಕ ಜವಾಬ್ದಾರಿಗಳನ್ನು ಸಮತೋಲನದಲ್ಲಿಟ್ಟುಕೊಂಡು ಕನಸುಗಳನ್ನು ಬೆನ್ನಟ್ಟುವ ಆತ್ಮವಿಶ್ವಾಸ, ಸ್ವಯಂ ಬೆಳವಣಿಗೆ ಮತ್ತು ಹೋರಾಟದ ಸಂಕೇತವಾಗಿದೆ ಎಂದರು.

ಧೈರ್ಯ, ಪರಿಶ್ರಮ ಹಾಗೂ ದೃಢಸಂಕಲ್ಪದೊಂದಿಗೆ ಆರಾಮದಾಯಕ ವಲಯದಿಂದ ಹೊರಬಂದು ಹೊಸ ಅವಕಾಶಗಳನ್ನು ಸ್ವೀಕರಿಸಿದಾಗ ಸಾಧನೆ ಸಾಧ್ಯ ಎಂಬುದಕ್ಕೆ ಈ ಗೆಲುವು ಸಾಕ್ಷಿಯಾಗಿದೆ. ತಮ್ಮ ಸಾಧನೆ ಇತರ ಮಹಿಳೆಯರಿಗೂ ಕನಸುಗಳನ್ನು ನನಸಾಗಿಸಲು ಪ್ರೇರಣೆಯಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖಾಸರಾದ ಹರೀಶ್ ಶೆಟ್ಟಿ , ಶ್ರೀ ಲಕ್ಷ್ಮಿ , ಸಿದ್ದಾರ್ಥ್ ಶೆಟ್ಟಿ , ಪ್ರಜ್ವಲ್ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!