ತೌಡುಗೋಳಿಯಲ್ಲಿ ಸ್ಕೂಟರ್ ಅಪಘಾತ:ಆಸ್ಪತ್ರೆಗೆ ಸಾಗಿಸುವ ಮಧ್ಯೆ ವ್ಯಕ್ತಿ ಮೃತ್ಯು

ಮಂಜೇಶ್ವರ : ವರ್ಕಾಡಿ ಕೆದುಂಬಾಡಿಯ ತೌಡುಗೋಳಿ ಬಳಿ ಬಾನುವಾರ ರಾತ್ರಿ 10.30ರ ಸುಮಾರಿಗೆ ಸ್ಕೂಟರ್ ನಿಯಂತ್ರಣ ತಪ್ಪಿ ಮಗುಚಿ ಉಂಟಾದ ಅಪಘಾತದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

ಈ ಅಪಘಾತದಲ್ಲಿ ನರಿಂಗಾನ ನಿವಾಸಿ, 56 ವರ್ಷದ ಅಲೆಕ್ಸ್ ಡಿಸೋಜ ಎಂಬುವರು ತೀವ್ರ ಗಾಯಗೊಂಡರು. ತಕ್ಷಣ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.ಈ ಸಂಬಂಧ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!