ಕ್ರಿಸ್ಮಸ್ ಸಂಭ್ರಮಕ್ಕೆ ಚಾಲನೆ: ಹೋಮ್ ಶಾಪ್‌ನಲ್ಲಿ ಕೇಕ್ ಮಿಕ್ಸಿಂಗ್ ಮತ್ತು ಕ್ರಿಸ್ಮಸ್ ಟ್ರೀ ಬೆಳಗಿಸುವ ಕಾರ್ಯಕ್ರಮ

ಮಂಗಳೂರು: ಕ್ರಿಸ್ಮಸ್ ಹಬ್ಬದ ಸಂಭ್ರಮಕ್ಕೆ ಸ್ವಾಗತ ಕೋರುವ ನಿಟ್ಟಿನಲ್ಲಿ ಮಂಗಳೂರಿನ ಹೋಮ್ ಶಾಪ್‌ನ ಶೋರೂಂನಲ್ಲಿ ಸಾಂಪ್ರದಾಯಿಕ ಕೇಕ್ ಮಿಕ್ಸಿಂಗ್ ಹಾಗೂ ಕ್ರಿಸ್ಮಸ್ ಟ್ರೀ ಬೆಳಗಿಸುವ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಹಾಗೂ ಸಮುದಾಯದ ಸದಸ್ಯರು ಪಾಲ್ಗೊಂಡರು.

ಬೆಲಿಷಿಯಸ್ ಬೇಕ್ಸ್ ಸಹಯೋಗದಲ್ಲಿ ಕೇಕ್ ಮಿಕ್ಸಿಂಗ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಸ್ಥೆಯು ಕ್ರಿಸ್ಮಸ್ ಹಬ್ಬಕ್ಕಾಗಿ ವಿಶೇಷ ಕೇಕ್‌ಗಳ ಶ್ರೇಣಿಯನ್ನು ಪರಿಚಯಿಸಿತು. ಅತಿಥಿಗಳು ಒಣಹಣ್ಣುಗಳು, ಬೀಜಗಳು, ದ್ರವ್ಯಗಳು, ಹಣ್ಣಿನ ರಸ ಸೇರಿದಂತೆ ವಿವಿಧ ಪದಾರ್ಥಗಳನ್ನು ಮಿಶ್ರಣ ಮಾಡುವ ಮೂಲಕ ಸಂಪ್ರದಾಯದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ, ಕೇಕ್ ಮಿಕ್ಸಿಂಗ್ ಸಂಪ್ರದಾಯದ ಇತಿಹಾಸ ಹಾಗೂ ಯುರೋಪಿಯನ್ ಮತ್ತು ಇಂಗ್ಲಿಷ್ ಸಂಸ್ಕೃತಿಯಲ್ಲಿ ಅದರ ಮೂಲದ ಬಗ್ಗೆಯೂ ತಿಳಿಸಲಾಯಿತು. ಹಿಂದಿನ ಕಾಲದಲ್ಲಿ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಒಣಹಣ್ಣುಗಳು, ಬೀಜಗಳು ಹಾಗೂ ವಿವಿಧ ಪದಾರ್ಥಗಳನ್ನು ಮಿಶ್ರಣ ಮಾಡಿ, ಅವುಗಳನ್ನು ಕೆಲಕಾಲ ನೆನೆಸಿಟ್ಟು ಕ್ರಿಸ್ಮಸ್ ಕೇಕ್ ತಯಾರಿಸುತ್ತಿದ್ದ ಸಂಪ್ರದಾಯದ ಕುರಿತು ವಿವರಿಸಲಾಯಿತು.

ಅಡ್ರಿಯನ್ ಡಿಸೋಜಾ (ಮನು) ಅವರು ತಮ್ಮ ತಂದೆ-ತಾಯಿ ಹಾಗೂ ಖ್ಯಾತ ಸಮಾಜಸೇವಕರಾದ ಮೈಕಲ್ ಡಿಸೋಜಾ ದಂಪತಿಯೊಂದಿಗೆ ಕ್ರಿಸ್ಮಸ್ ಟ್ರೀ ಬೆಳಗಿಸಿದರು. ಇದೇ ಸಂದರ್ಭದಲ್ಲಿ ವಿಶೇಷ ಕೊಡುಗೆಗಳೊಂದಿಗೆ ಗೃಹೋಪಯೋಗಿ ಅಲಂಕಾರಿಕ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸುವ ಕ್ರಿಸ್ಮಸ್ ಫರ್ನಿಶಿಂಗ್ ಕೌಂಟರ್‌ನ್ನೂ ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ವಾಲ್ಟರ್ ನಂದಳಿಕೆ, ಟೈಟಸ್ ನೊರೊನ್ಹಾ, ವಿನ್ಸೆಂಟ್ ಕುಟಿನ್ಹಾ, ರಮೋನಾ ಮಥಾಯಸ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಬೆಲಿಷಿಯಸ್ ಬೇಕ್ಸ್ ಗುಣಮಟ್ಟದ ಸಾಮಗ್ರಿಗಳನ್ನು ಬಳಸಿ ಸಾಂಪ್ರದಾಯಿಕ ವಿಧಾನದಲ್ಲಿ ವಿವಿಧ ಕೇಕ್ ಹಾಗೂ ಸಿಹಿತಿಂಡಿಗಳನ್ನು ತಯಾರಿಸುವ ಸಂಸ್ಥೆಯಾಗಿದೆ. ಆಹಾರ ಮತ್ತು ಪಾನೀಯ ಉದ್ಯಮದ ಸಂಸ್ಥೆಗಳಿಗೆ ಕೇಕ್, ಸಿಹಿತಿಂಡಿ ಹಾಗೂ ಬ್ರೆಡ್‌ಗಳನ್ನು ಪೂರೈಸುವ ಕಾರ್ಯದಲ್ಲಿ ತೊಡಗಿಕೊಂಡಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!