ಮದುವೆಯ ಆಮಿಷವೊಡ್ಡಿ ವಿವಾಹಿತ ಯುವತಿಗೆ ಲೈಂಗಿಕ ಕಿರುಕುಳ: ಮಲಪ್ಪುರಂನಲ್ಲಿ ಆರೋಪಿ ಮುಹ್ಸಿನ್ ಬಂಧನ

ಕಾಸರಗೋಡು : ವಿವಾಹಿತ ಯುವತಿಯೊಬ್ಬಳಿಗೆ ಮದುವೆಯ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕಲ್ಲಿಕೋಟೆ ರಾಮನಾಟುಕರ ಮೂಲದ ಮುಹ್ಸಿನ್ (35) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದ ಯುವತಿಯ ಬಳಿ, ಪತಿಯನ್ನು ತೊರೆದು ಬಂದರೆ ಮದುವೆಯಾಗುವುದಾಗಿ ನಂಬಿಸಿ ಕಿರುಕುಳ ನೀಡಿದ್ದಾನೆ ಎಂಬ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.

ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗಾಗಿ ಪೊಲೀಸ್ ಕಮಿಷನರ್ ಬಿ.ವಿ. ವಿಜಯ್ ಭರತ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ತನಿಖೆ ಚುರುಕುಗೊಳಿಸಲಾಗಿತ್ತು.

ಇದರಂತೆ ಎಸಿಪಿ ಎಂ.ಪಿ. ಆಜಾದ್ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಮಲಪ್ಪುರಂನ ಪಳ್ಳಿಕಲ್‌ನಿಂದ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!