ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ಎಕೆಪಿಎ) ಕಾಸರಗೋಡು ಜಿಲ್ಲಾ ಸಮ್ಮೇಳನವು 2027ರ ಏಪ್ರಿಲ್ 27 ಮತ್ತು 28ರಂದು ರಾಜಪುರಂ ಪ್ಯಾರಿಷ್ ಹಾಲ್ನಲ್ಲಿ ನಡೆಯಲಿದೆ.

ಸಮ್ಮೇಳನದ ಯಶಸ್ವಿ ಆಯೋಜನೆಗಾಗಿ ಸ್ವಾಗತ ಸಮಿತಿ ರಚಿಸುವ ಸಭೆಯು ನವೆಂಬರ್ 24ರಂದು ಮಧ್ಯಾಹ್ನ 2.30ಕ್ಕೆ ಇರಿಯದ ನೀಲಾಂಬರಿ ಆಡಿಟೋರಿಯಂನಲ್ಲಿ ನಡೆಯಿತು.ಜಿಲ್ಲಾ ಅಧ್ಯಕ್ಷ ಸುಗುಣನ್ ಟಿ.ವಿ. ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಪುಲ್ಲೂರು-ಪೆರಿಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಡಾ. ಸಿ.ಕೆ. ಸಬಿತಾ ಉದ್ಘಾಟಿಸಿದರು.

ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಶಿಬುರಾಜ್ ಕಣ್ಣೂರು, ರಾಜ್ಯ ವೆಲ್ಫೇರ್ ಸಮಿತಿ ಅಧ್ಯಕ್ಷ ಹರೀಶ್ ಪಾಲಕ್ಕುನ್ನು, ರಾಜ್ಯ ಸಮಿತಿ ಸದಸ್ಯ ವಿ.ಎನ್. ರಾಜೇಂದ್ರನ್, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ರಾಜಪುರಂ ಘಟಕದ ಅಧ್ಯಕ್ಷ ಜೇನ್ ಪಿ. ವರ್ಗೀಸ್, ಕೆವಿವಿಎಸ್ ಚುಳ್ಳಿಕ್ಕರ ವಲಯದ ಖಜಾಂಚಿ ಸಿನು ಕುರಿಯಾಕೋಸ್, ರಾಜಪುರಂ ಪ್ರೆಸ್ ಫೋರಂ ಅಧ್ಯಕ್ಷ ಜಿ. ಶಿವದಾಸನ್, ಜಿಲ್ಲಾ ಖಜಾಂಚಿ ಕೆ. ಸುಧೀರ್, ಜಿಲ್ಲಾ ಉಪಾಧ್ಯಕ್ಷ ಸುರೇಶ್ ಆಚಾರ್ಯ, ಜಿಲ್ಲಾ ಜಂಟಿ ಕಾರ್ಯದರ್ಶಿಗಳಾದ ಅನಿಲ್ ಕಾಮಲೋನ್ ಮತ್ತು ಮನು ಎಲ್ಲೋರ, ಜಿಲ್ಲಾ ಪಿಆರ್ಒ ರಾಜೀವನ್ ಸ್ನೇಹ, ಜಿಲ್ಲಾ ವೆಲ್ಫೇರ್ ಸಮಿತಿ ಅಧ್ಯಕ್ಷ ಶ್ರೀಜಿತ್ ನಿಲಾಯಿ, ಜಿಲ್ಲಾ ವಿಮಾ ಸಂಯೋಜಕ ಸಂತೋಷ್ ಫೋಟೋಮ್ಯಾಕ್ಸ್, ಮಹಿಳಾ ವಿಭಾಗದ ಜಿಲ್ಲಾ ಸಂಯೋಜಕಿ ರೇಖಾ ಕೆ.ಕೆ., ಜಿಲ್ಲಾ ನ್ಯಾಚುರಲ್ ಕ್ಲಬ್ ಸಂಯೋಜಕ ದಿನೇಶ್ ಇಸೈಟ್, ಜಿಲ್ಲಾ ರಕ್ತದಾನ ಸಮಿತಿ ಅಧ್ಯಕ್ಷ ಸನ್ನಿ ಜೇಕಬ್, ಜಿಲ್ಲಾ ಕ್ರೀಡಾ ಕ್ಲಬ್ ಸಂಯೋಜಕ ಮೊಹಮ್ಮದ್ ಕುಂಜಿ, ಜಿಲ್ಲಾ ಸ್ವಾಶ್ರಯ ಸಂಘದ ಸಂಯೋಜಕ ಎನ್.ಎ. ಭರತನ್ ಹಾಗೂ ವಲಯ ಪದಾಧಿಕಾರಿಗಳಾದ ಪ್ರಶಾಂತ್ ಮೊನಾಲಿಸಾ, ಸುರೇಶ್ ಫೋಟೋ ಪ್ಲಸ್, ಗೋಕುಲ್ ಚೋಯಂಕೋಡ್ ಮತ್ತು ಸರಿತಾ ಎಲ್ಲಾರ ಮಾತನಾಡಿ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಡಿ.ಜೆ. ಮೆಮೋರಿಯಲ್ ಪ್ರಶಸ್ತಿ ಪುರಸ್ಕೃತ ದಿನೇಶ್ ಇನ್ಸೈಟ್ ಅವರನ್ನು ಸನ್ಮಾನಿಸಲಾಯಿತು.ಜಿಲ್ಲಾ ಕಾರ್ಯದರ್ಶಿ ಪ್ರಜಿತ್ ಎನ್.ಕೆ. ಸ್ವಾಗತಿಸಿದರು. ಜಿಲ್ಲಾ ಉಪಾಧ್ಯಕ್ಷ ರಂಜಿ ಐ. ಮ್ಯಾಜಿಕ್ ವಂದಿಸಿದರು.

