ಭಕ್ತಿ, ಭಾವನೆ ಹಾಗೂ ಆಧ್ಯಾತ್ಮಿಕತೆಯ ಸುಂದರ ಸಂಗಮವಾಗಿ ಮೂಡಿಬಂದಿರುವ ‘ಸ್ವರ್ಣ ಸನ್ನಿಧಿ’ ಭಕ್ತಿ ಆಲ್ಬಮ್ ನಾಳೆ (ನವೆಂಬರ್ 28, 2026ರ ಶನಿವಾರ ರಾತ್ರಿ )ತತ್ವಮಸಿ ಯೂಟ್ಯೂಬ್ ಚಾನೆಲ್‌ನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.
ಸಂಗೀತದ ಮೂಲಕ ಭಕ್ತಿಯ ಮಹತ್ವವನ್ನು ಜನಮಾನಸಕ್ಕೆ ತಲುಪಿಸುವ ಆಶಯದೊಂದಿಗೆ ಸಿದ್ಧಗೊಂಡಿರುವ ಈ ಭಕ್ತಿ ಆಲ್ಬಮ್ ಭಕ್ತರ ನಿರೀಕ್ಷೆಯನ್ನು ಹೆಚ್ಚಿಸಿದೆ. ಭಕ್ತಿರಸದಿಂದ ಕೂಡಿದ ಹಾಡಿಗೆ, ಮನಮೋಹಕ ಸಂಗೀತ ಸಂಯೋಜನೆ ಹಾಗೂ ಆಧ್ಯಾತ್ಮಿಕ ಭಾವನೆಗಳನ್ನು ಒಳಗೊಂಡಿರುವ ‘ಸ್ವರ್ಣ ಸನ್ನಿಧಿ’ ಸಂಗೀತ ಪ್ರೇಮಿಗಳಿಗೆ ವಿಶೇಷ ಅನುಭವ ನೀಡುವ ನಿರೀಕ್ಷೆಯಿದೆ.

ಈ ಭಕ್ತಿ ಆಲ್ಬಮ್‌ನ ಬಿಡುಗಡೆ ಸಮಾರಂಭಕ್ಕೆ ‘ಸು ಫ್ರಮ್ ಸೋ’ ಖ್ಯಾತಿಯ ನಟ ಹಾಗೂ ನಿರ್ದೇಶಕ ಜೆ.ಪಿ. ತೂಮಿನಾಡ್ ಹಾಗೂ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಹಾಗೂ ರಂಗಭೂಮಿ ಕಲಾವಿದರು ಆಗಮಿಸಲಿರುವುದು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದೆ. ಅವರ ಆಗಮನದಿಂದ ಬಿಡುಗಡೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ದೊರೆಯಲಿದೆ.
ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ವೇದಿಕೆ ಭಕ್ತಿ ಸಂಗೀತ ಹಾಗೂ ಸಾಂಸ್ಕೃತಿಕ ಕಲೆಗೆ ಉತ್ತಮ ವೇದಿಕೆಯಾಗಿದ್ದು, ಈ ನಿಟ್ಟಿನಲ್ಲಿ ತತ್ವಮಸಿ ಯೂಟ್ಯೂಬ್ ಚಾನೆಲ್ ಮೂಲಕ ‘ಸ್ವರ್ಣ ಸನ್ನಿಧಿ’ಯನ್ನು ಪ್ರೇಕ್ಷಕರಿಗೆ ಅರ್ಪಿಸಲಾಗುತ್ತಿದೆ.
ಭಕ್ತರು, ಕಲಾಭಿಮಾನಿಗಳು ಹಾಗೂ ಸಂಗೀತಾಸಕ್ತರು ಈ ಭಕ್ತಿ ಆಲ್ಬಮ್‌ಗೆ ಪ್ರೋತ್ಸಾಹ ನೀಡುವ ಮೂಲಕ ಕಲಾವಿದರ ಪ್ರಯತ್ನಕ್ಕೆ ಬೆಂಬಲ ನೀಡಬೇಕೆಂದು ವಿನಂತಿಸಲಾಗಿದೆ.
