’ಕನಕದಾಸರು ಸಮನತೆಯ ಹರಿಕಾರರು’

ಮಂಗಳೂರು: ದಾರ್ಶನಿಕರ ಕಥೆಗಳು,ವಾಣಿಗಳು ಜನರಿಗೆ ಒಳ್ಳೆಯ ಜೀವನಕ್ಕೆ ಸ್ಫೂರ್ತಿ ಹಾಗೂ ಇನ್ನು ಸಾವಿರ ವರ್ಷ ಕಳೆದರೂ ಅವರ ಸಂದೇಶ ಪ್ರಸ್ತುತವಾಗಿರುತ್ತದೆ ಮತ್ತು ಸಮನತೆಯ ಹರಿಕಾರರು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್‌ ಹೇಳಿದರು
ಅವರು ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ ಅವರ ವತಿಾುಂದ ತುಳು ಭವನದಲ್ಲಿ ಕನಕ ಜಯಂತಿ ಉದ್ಘಾಟಿಸಿ ಮಾತನಾಡಿದರು.


ಮುಖ್ಯ ಅತಿಥಿ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಕೆ ಅವರು ಮಾತನಾಡಿ, ಜಯಂತಿಗಳು ಶ್ರೇಷ್ಠ ಮಹಾತ್ಮರನ್ನು ನೆನೆಪು ಮಾಡಿ ಇಂದಿನ ಯುವ ಜನಾಂಗಕ್ಕೆ ಸ್ಫೂರ್ತಿಯಾಗುತ್ತದೆ ಎಂದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಬಾಪೂಜಿ ನಗರ,ಶಿವಮೊಗ್ಗದ ಕನ್ನಡ ಸಹ ಪ್ರಾಧ್ಯಾಪಕ ಡಾ.ಮಂಜುನಾಥ್‌ ಎಂ.ಎಂ ಉಪನ್ಯಾಸ ನೀಡಿ, ಕನಕದಾಸರು ಹುಟ್ಟಿನಿಂದಲೇ ತನ್ನ ವ್ಯಕ್ತಿತ್ವ ಹಾಗೂ ಜೀವನದ ಮೂಲಕ ಜನಮನ್ನಣೆ ಪಡೆದರು ಎಂದರು.ಅಧ್ಯಕ್ಷತೆ ವಹಿಸಿದ ಮಂಗಳೂರು ಮಹಾನಗರ ಪಾಲಿಕೆ ಆಯ್ತುಕ ರಾಹುಲ್‌ ರತ್ನಂ ಪಾಂಡೆ ಮಾತನಾಡಿ, ಕನಕದಾಸರು ಕೀರ್ತನೆಗಳ ಮೂಲಕ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ವ್ಯಕ್ತಿಯು ಮೂಲಕ ಆಧ್ಯಾತ್ಮಿಕ ಉನ್ನತಿಗೆ ಪ್ರೇರಣೆಯಾದರು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ ಜಿ ಸ್ವಾಗತಿಸಿದರು. ಕರಾವಳಿ ಕುರುಬರ ಸಂಘ ಮಂಗಳೂರು ಅಧ್ಯಕ್ಷ ಅನಿಲ್‌ ಕುಮಾರ್‌ ಭೂಮರೆಡ್ಡಿ, ನಿರಂಜನ್‌, ಹಾಲುಮತ ಮಹಾಸಭಾದ ಗೌರವ ಅಧ್ಯಕ್ಷ ಮಲಿಯಪ್ಪ ಕರಿಯಪ್ಪ ಕಂಬ್ಳಿ, ಕರಾವಳಿ ಹಾಲುಮತ ಕುರುಬರ ಸಂಘದ ಅಧ್ಯಕ್ಷ ಚಂದ್ರಪ್ಪ ಬಿ ಕೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಜಿಲ್ಲಾ ಅಧ್ಯಕ್ಷ ಯಮುನಪ್ಪ ಶಿರಹಟ್ಟಿ, ಕರ್ನಾಟಕ ಪ್ರದೇಶ ಕುರುಬರ ಸಂಘ ಬೆಂಗಳೂರು ನಿರ್ದೇಶಕ ಶಿವಾನಂದ ಯರಝೇರಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ರಾಜೇಶ್‌ ಐ ಮೊದಲಾದವರು ಉಪಸ್ಥಿತರಿದ್ದರು. ವಾರಣಿ ನಾಗರಾಜ್‌ ಕಾರ್ಯಕ್ರಮ ನಿರೂಪಿಸಿದರು.

ಎಸ್.ಸಿ/ಎಸ್.ಟಿ ಮಹಿಳೆಯರ ಸಾಂವಿಧಾನಿಕ ನಾಗರಿಕ ಹಕ್ಕುಗಳು ಮತ್ತು ಕಾನೂನು ಸಬಲೀಕರಣ ಕಾರ್ಯಕ್ರಮ
ಮಂಗಳೂರು,ನ.27,(ಕ.ವಾ):- ಮಂಗಳೂರು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಹಾಗೂ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಡಿ.ಸಿ.ಆರ್.ಇ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರ ಸಾಂವಿಧಾನಿಕ ನಾಗರಿಕ ಹಕ್ಕುಗಳು ಮತ್ತು ಕಾನೂನು ಸಬಲೀಕರಣ ಕಾರ್ಯಕ್ರಮವು ತಣ್ಣೀರುಬಾವಿ ಅಂಬೇಡ್ಕರ್ ಸಭಾಭವನದಲ್ಲಿ ಗುರುವಾರ ಆಯೋಜಿಸಲಾಯಿತು.
ಪಶ್ಚಿಮ ವಲಯ ಡಿ.ಸಿ.ಆರ್.ಇ ಪೋಲಿಸ್ ಅಧೀಕ್ಷಕ ಸೈಮನ್ ಸಿ.ಎ ಅವರು “ನಾಗರಿಕ ಹಕ್ಕು ಎಂದರೇನು?”, “ನಾನು ಒಬ್ಬ ನಾಗರಿಕ – ನನಗೆ ಹಕ್ಕುಗಳಿವೆ” ಮತ್ತು ಡಿ.ಸಿ.ಆರ್.ಇ ಸ್ಥಾಪನೆಯ ಉದ್ದೇಶ ಹಾಗೂ ಕಾರ್ಯ ವ್ಯಾಪ್ತಿಯ ಬಗ್ಗೆ ವಿವರಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್ ವಕೀಲೆ ಮಾನಸ ಜಿ ಹೆಗ್ಡೆ ಅವರು ಎಸ್.ಸಿ/ಎಸ್.ಟಿ ( ಪ್ರಿವೆಂಷನ್ ಆಫ್ ಅಟ್ರಾಸಿಟಿ) ಆ್ಯಕ್ಟ್, 1989 ಮತ್ತು ಎಸ್.ಸಿ/ಎಸ್.ಟಿ ನಿಯಮಗಳು- ಸಂತ್ರಸ್ತರ ಪ್ರಾಯೋಗಿಕ ಹಕ್ಕುಗಳು ಹಾಗೂ ಮಹಿಳೆಯರ ಕಾನೂನು ಹಕ್ಕುಗಳ ಬಗ್ಗೆ ವಿವರಿಸಿದರು.
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೆÇಲೀಸ್ ಠಾಣೆ ಪೆÇಲೀಸ್ ಉಪಾಧೀಕ್ಷಕ ಲೊಕೇಶ್ ಅವರು ಪೆÇಲೀಸ್ ಮತ್ತು ಕ್ರಿಮಿನಲ್ ನ್ಯಾಯ ಮತ್ತು ಸೈಬರ್ ಮತ್ತು ಡಿಜಿಟಲ್ ಕಾನೂನು ಜಾಗೃತಿ ಬಗ್ಗೆ ವಿವರಿಸಿದರು.


ಮೂಡಬಿದ್ರೆ ಉಪ ತಹಶೀಲ್ದಾರ್ ರಾಮು ಅವರು ಕಂದಾಯ ಇಲಾಖೆ ಭೂಮಿ, ಆಸ್ತಿ ಮತ್ತು ಕಂದಾಯ ಹಕ್ಕುಗಳ ಬಗ್ಗೆ ವಿವರಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಸುನೀತ ಸರ್ಕಾರಿ ಕಲ್ಯಾಣ ಯೋಜನೆಗಳು ಮತ್ತು ಹಕ್ಕುಗಳ ಬಗ್ಗೆ ವಿವರಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ ಅವರು ಮಾನವ ಹಕ್ಕುಗಳು ಮತ್ತು ಘನತೆ ಬಗ್ಗೆ ವಿವರಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ ಕಾರ್ಮಿಕ ಇಲಾಖೆ ಅವರು ಸಂಘಟಿತ ವಲಯ ಮತ್ತು ಅಸಂಘಟಿತ ವಲಯದಲ್ಲಿ ದೊರಕುವ ಸೌಲಭ್ಯದ ಬಗ್ಗೆ ಮಾತನಾಡಿದರು.
ಎನ್.ಜಿ.ಒ ನಿರ್ದೇಶಕಿ ಮೆರ್ಲಿನ್ ಮಾರ್ಟಿಸ್ ಅವರು ಕೆಲಸದ ವೇಳೆ ಮಹಿಳೆಯರಿಗೆ ಆಗುವ ದೌರ್ಜನ್ಯದ ಬಗ್ಗೆ ವಿವರಿಸಿದರು.
ಇದೇ ಸಂದರ್ಭದಲ್ಲಿ ಸಂವಿಧಾನ ದಿನದ ಅಂಗವಾಗಿ ಅಧಿಕಾರಿ/ ಸಿಬ್ಬಂದಿ ಮತ್ತು ಸಾರ್ವಜನಿಕರೊಂದಿಗೆ ಸಾಮೂಹಿಕವಾಗಿ ಭಾರತ ಸಂವಿಧಾನದ ಪೀಠಿಕೆಯನ್ನು ಓದುವುದರ ಮೂಲಕ ಆಚರಿಸಲಾಯಿತು. ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಸರ್ಕಾರದಿಂದ ದೊರಕುವ ಸೌಲಭ್ಯ ಮತ್ತು ಮೀಸಲಾತಿಗಳ ಬಗ್ಗೆ, ಕಾನೂನುಗಳ ಅರಿವು ಮೂಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸುಮಾರು 100 ರಿಂದ 150 ಜನ ಮಹಿಳೆಯರು ಭಾಗವಹಿಸಿದ್ದರು.

ವಿಶೇಷ ಕಾರ್ಯಪಡೆಯಿಂದ ಬೀಚ್ ಸ್ವಚ್ಛತೆ

ಮಂಗಳೂರು: ಸಂವಿಧಾನ ದಿನಾಚರಣೆ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಪಡೆ, ಮಂಗಳೂರು ಘಟಕದ ವತಿಯಿಂದ ಪಣಂಬೂರು ಬೀಚ್‌ನಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ವಿಶೇಷ ಕಾರ್ಯಪಡೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿ, ಬೀಚ್‌ನಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯ, ಕಸ ಹಾಗೂ ಇತರೆ ಅನಗತ್ಯ ವಸ್ತುಗಳನ್ನು ಸಂಗ್ರಹಿಸಿ ಸ್ವಚ್ಛಗೊಳಿಸಿದರು. ಸಾರ್ವಜನಿಕರಲ್ಲಿ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವುದು ಹಾಗೂ ಸ್ವಚ್ಛ ಪರಿಸರವನ್ನು ಕಾಪಾಡುವಂತೆ ಪ್ರೇರೇಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.ವಿಶೇಷ ಕಾರ್ಯಪಡೆಯ ಮುಖ್ಯ ಉದ್ದೇಶ ಕರಾವಳಿ ಭಾಗದಲ್ಲಿ ಕೋಮು ಸಂಘರ್ಷ ತಡೆಗಟ್ಟಿ, ಶಾಂತಿ ಹಾಗೂ ಕೋಮು ಸೌಹಾರ್ದತೆ ಕಾಪಾಡುವುದಾಗಿದೆ.
ಈ ಮೂಲಕ ವಿಶೇಷ ಕಾರ್ಯಪಡೆ ಸಾಮಾಜಿಕ ಜವಾಬ್ದಾರಿ ಹಾಗೂ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ತನ್ನ ಸಹಭಾಗಿತ್ವವನ್ನು ವ್ಯಕ್ತಪಡಿಸಿತು.
ಕಾರ್ಯಕ್ರಮದಲ್ಲಿ ವಿಶೇಷ ಕಾರ್ಯಪಡೆ ಘಟಕದ ಪೊಲೀಸ್ ಉಪಾಧೀಕ್ಷಕರು ಅಂಬರಾಯ ಕಾಮನಮನಿ ಮತ್ತು ವಿಶೇಷ ಕಾರ್ಯಪಡೆ ಉಡುಪಿ ಕಂಪನಿಯ ಉಸ್ತುವಾರಿ ಅಧಿಕಾರಿ ಸಿದ್ದಯ್ಯ RPI ಮತ್ತು ದಕ್ಷಿಣ ಕನ್ನಡ SAF ಕಂಪನಿಯ ಉಸ್ತುವಾರಿ ಅಧಿಕಾರಿ ಅಶೋಕ ಸದಲಗಿ PI ಮತ್ತು ಪಣಂಬೂರ ಪೊಲೀಸ್ ಠಾಣೆಯ ಇನ್ನಿತರ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!