ಸಾಮಾಜಿಕ ಪಿಡುಗುಗಳ ವಿರುದ್ಧ ಜನಾಂದೋಲನ -ಕಾಂಗ್ರೆಸ್ ಘೋಷಣೆ

ಕಾಸರಗೋಡು: ಮಾದಕ ದ್ರವ್ಯ ಮತ್ತಿತರ ಸಾಮಾಜಿಕ ಪಿಡುಗುಗಳು ಜನತೆಯ ಆರೋಗ್ಯದ ಮೇಲೆ ಮಾತ್ರವಲ್ಲ, ಒಟ್ಟು ದೇಶದ ಹಿತಾಸಕ್ತಿಯ ಮೇಲಿನ ದಾಳಿ ಎಂದೇ ಪರಿಗಣಿಸಬೇಕಾಗಿದೆ. ಇದು ನಾಡಿನ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರೋಗ್ಯ ಹಾಗೂ ಸಕಲ ವಲಯಗಳನ್ನೂ ವಿಕಲಗೊಳಿಸುವ ಮಹಾಮಾರಿಗಳಾಗಿವೆ. ಇದರ ವಿರುದ್ಧ ಪರಿಣಾಮಕಾರಿ ಜನಾಂದೋಲನ ನಡೆಸಲು ಕಾಂಗ್ರೆಸಿಗರು ಮುಂದಾಗಬೇಕು ಎಂದು ಇಂಟಕ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಹಾಗೂ ವರ್ಕಾಡಿ ಮಂಡಲ ಕಾಂಗ್ರೆಸ್ ಉಸ್ತುವಾರಿ ಶ್ರೀ ಶಾಹುಲ್ ಹಮೀದ್ ಪೆರ್ಲ ಕರೆ ನೀಡಿದ್ದಾರೆ.
ಎಐಸಿಸಿ ಹಾಗೂ ಕೆಪಿಸಿಸಿ ಆದೇಶ ಪ್ರಕಾರ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ವರ್ಕಾಡಿ ಮಂಡಲ ಕಾಂಗ್ರೆಸ್ ಸಮಿತಿಯು ಪೊಯ್ಯತ್ತಬೈಲ್ ಶ್ರೀ ಸದಾಶಿವ ಕೈತಿಮಾರ್ ರವರ ನಿವಾಸದಲ್ಲಿ ಆಯೋಜಿಸಿದ ಮಹಾ ಕುಟುಂಬ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀ ಸದಾಶಿವ ಕೈತಿಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇತಾರರಾದ ಶ್ರೀ ಮುಹಮ್ಮದ್ ಡಿಎಂಕೆ, ಮುಹಮ್ಮದ್ ಮಜಾಲ್, ಪುರುಷೋತ್ತಮ ಅರಿಬೈಲ್,ಉಮ್ಮರ್ ಬೋರ್ಕಳ, ಕಮಲಾಕ್ಷಿ,
ಉಮೇಶ್ ಶೆಟ್ಟಿ, ರಾಬಿಯಾ, ಅಶ್ರಫ್ ಕೆಕೆ, ಅಜೀಜ್ ಕಲ್ಲೂರು, ಹಮೀದ್ ಕಣಿಯೂರು, ವಿನೋದ್ ಪಾವೂರು, ಸಲಾಂ ಮಾಂಕೋಡಿ, ಶಕುಂತಲಾ, ವೇದಾವತಿ, ಶೈಲೇಶ್, ಕೆಎಚ್ ಅಬೂಬಕ್ಕರ್, ಉಮ್ಮರ್ ಪಾಲೆಂಗ್ರಿ, ಶಮೀರ್ ಮಾಂಕೋಡಿ, ಮುಸ್ತಫಾ ವೇದೊಡಿ, ಇಬ್ರಾಹಿಂ ಧರ್ಮನಗರ, ಮೂಸಾ ಧರ್ಮನಗರ ಮುಂತಾದವರು ಉಪಸ್ಥಿತರಿದ್ದರು. ಶ್ರೀ ಎಎಂ ಉಮ್ಮರ್ ಕುಂಞಿ ಸ್ವಾಗತಿಸಿ, ಶ್ರೀ ಅಲಿ ಧರ್ಮನಗರ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!