ದೇಶದ ಎರಡನೇ ಅತ್ಯುನ್ನತ ಸಾಂವಿಧಾನಿಕ ಮುಖ್ಯಸ್ಥರಾದ ಉಪರಾಷ್ಟ್ರಪತಿ ಚುನಾವಣೆಯು ಸೆಪ್ಟೆಂಬರ್ 9 ರಂದು ನಡೆಸಲು ಚುನಾವಣಾ ಆಯೋಗ ಈಗಾಗಲೇ ನಿರ್ಧರಿಸಿ ಅಧಿಸೂಚನೆ ಹೊರಡಿಸಿದೆ .ಉಪರಾಷ್ಟ್ರಪತಿಯಾಗಿದ್ದ ಜಗದೀಪ್ ಧನಕರ್ ತನ್ನ ಹುದ್ದೆಗೆ ಇತ್ತೀಚಿಗೆ ಧಿಡೀರ್ ರಾಜೀನಾಮೆ ನೀಡಿದ ಕಾರಣ ಈ ಸ್ಥಾನ ತೆರವು ಆಗಿದೆ.ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸಂಸತ್ತಿನ ಉಭಯ ಸದನಗಳಾದ ರಾಜ್ಯಸಭೆ ಹಾಗೂ ಲೋಕಸಭೆ ಯ ಚುನಾಯಿತ ಪ್ರತಿನಿಧಿಗಳು ಹಾಗೂ ನಾಮನಿರ್ದೇಶನಗೊಂಡ ಸದಸ್ಯರು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರು.
ಸಂವಿಧಾನದ 68 ನೇ ವಿಧಿ ಕಾಲಂ 2 ರ ಪ್ರಕಾರ ಉಪರಾಷ್ಟ್ರಪತಿ ಚುನಾವಣೆಯ ಪ್ರಕ್ರಿಯೆಗಳು ನಡೆಯುತ್ತದೆ.ಈ ಪ್ರಕಾರವಾಗಿ ಭಾರತೀಯ ಚುನಾವಣಾ ಆಯೋಗವು ದೇಶದ 17 ನೇ ಉಪರಾಷ್ಟ್ರಪತಿ ಚುನಾವಣೆಗೆ ದಿನಾಂಕವನ್ನು ಘೋಷಿಸಿದ್ದು ಆಗಸ್ಟ್ 7 ರಂದು ಚುನಾವಣೆಯ ಅಧಿಸೂಚನೆ ಹೊರಡಿಸಿದೆ .ಆಗಸ್ಟ್ 21 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಆಗಸ್ಟ್ 25 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.ಪ್ರಸ್ತುತ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರ ಲೆಕ್ಕಾಚಾರದ ಪ್ರಕಾರ ಆಡಳಿತರೂಢ NDA ಮೈತ್ರಿ ಕೂಟಕ್ಕೆ ಸ್ಪಷ್ಟ ಬಹುಮತ ವಿದ್ದು ತನ್ನ ಅಭ್ಯರ್ಥಿ ಗೆಲುವು ಖಚಿತ ವಾಗಿದೆ. ಅಭ್ಯರ್ಥಿ ಗೆಲ್ಲಬೇಕಾದ ಮ್ಯಾಜಿಕ್ ಸಂಖ್ಯೆ 394 ಆಗಿದೆ. ಸದ್ಯ ಉಭಯ ಸದನಗಳಲ್ಲಿ NDA ಈ ಮ್ಯಾಜಿಕ್ ಸಂಖ್ಯೆ ಯನ್ನು ಸುಲಭವಾಗಿ ದಾಟಬಹುದು. ಅಂದರೆ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ವಿವಿಧ ಮೈತ್ರಿಕೂಟ ಹಾಗೂ ಪಕ್ಷತೆರ ಸಹಿತ 786 ಸದಸ್ಯರು ಇದ್ದಾರೆ. ಇದರಲ್ಲಿ ಲೋಕಸಭೆ ಯಲ್ಲಿ N D A 293 , INDIA 236, ಇತರ 13 ಸದಸ್ಯರು ಇದ್ದಾರೆ. ರಾಜ್ಯಸಭೆ ಯಲ್ಲಿ NDA 129. INDIA 87 ಮತ್ತು ಇತರ 20 ಸದಸ್ಯರು ಇದ್ದಾರೆ.ಈ ಪ್ರಕಾರವಾಗಿ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ NDA ಗೆ ಸುಮಾರು 422 ಸದಸ್ಯರ ಬಲವಿದೆ.
ಸಂವಿಧಾನದ ವಿಧಿಯ ಪ್ರಕಾರ ಉಪರಾಷ್ಟ್ರಪತಿಗಳು ರಾಜ್ಯಸಭೆಯ ಅಧ್ಯಕ್ಷರಾಗಿದ್ದು ಸಭೆಯ ಕಾರ್ಯಕಲಾಪವನ್ನು ಸುಸೂತ್ರವಾಗಿ ನಡೆಸುವ ಮಹತ್ತರ ಜವಾಬ್ದಾರಿ ಇವರಿಗೆ ಇದೆ.ರಾಷ್ಟ್ರಪತಿಯ ನಂತರ ದೇಶದ ಅತ್ಯುನ್ನತ ಸಾಂವಿಧಾನಿಕ ಅಧಿಕಾರಿಯಾಗಿದ್ದಾರೆ.ಉಪರಾಷ್ಟ್ರ ಪತಿ ಹುದ್ದೆಗೆ ಸ್ಪರ್ದಿಸುವ ಅಭ್ಯರ್ಥಿ ಯು ಕೆಲವು ಮಾನದಂಡಗಳ ಜೊತೆಗೆ 15000 ರೂಗಳ ಠೇವಣಿ ಇಡಬೇಕು ಜೊತೆಗೆ 20 ಸದಸ್ಯರು ಇವರ ನಾಮಪತ್ರ ವನ್ನು ಅನುಮೋದಿಸಬೇಕು ಮತ್ತು ಸೂಚಿಸಬೇಕು ಈಗಾಗಲೇ ಉಪರಾಷ್ಟ್ರ ಪತಿ ಚುನಾವಣೆ ಯ ಕಾವು ಅಧಿಕವಾಗಿದ್ದು ಸಮರ್ಥ ಹಾಗೂ ಅನುಭವಿ ಉಪರಾಷ್ಟ್ರ ಪತಿ ಯನ್ನು ನೋಡುವ ತವಕದಲ್ಲಿ ದೇಶ ವಿದೇ ಆಡಳಿತಾರೂಢ NDA ಉಪರಾಷ್ಟ್ರಪತಿ ಹುದ್ದೆಗೆ ಮಹಾರಾಷ್ಟ್ರ ರಾಜ್ಯಪಾಲ ಸಿ ಪಿ ರಾಧಾಕೃಷ್ಣನ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ.ಪ್ರಧಾನಿ ನರೇಂದ್ರ ಮೋದಿ ಯವರ ಅಧ್ಯಕ್ಷತೆಯಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಮಾಡಲಾಯಿತು.ಕೇಂದ್ರ ಸಚಿವ ಜೆ ಪಿ ನಡ್ಡಾ ರಾಧಾಕೃಷ್ಣನ್ ನವರ ಹೆಸರನ್ನು ಘೋಷಿಸಿದರು .
ಸಂಪ್ರದಾಯದಂತೆ ಉಪರಾಷ್ಟ್ರಪತಿಗಳು ಅವಿರೋಧವಾಗಿ ಆಯ್ಕೆಯಾಗಲು ವಿರೋಧ ಪಕ್ಷಗಳ ಜೊತೆ ಮಾತುಕತೆ ನಡೆಸಲಾಗುವುದೆಂದು ಮೂಲಗಳು ತಿಳಿಸಿವೆ.ಮಾಜಿ ಪ್ರಧಾನಿ ಎ ಬಿ ವಾಜಪೇಯಿ ಹಾಗೂ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಯವರ ಜೊತೆ ಕೆಲಸ ಮಾಡಿದ ಅನುಭವ ಇವರದ್ದಾಗಿದೆ .ರಾಧಾಕೃಷ್ಣನ್ ತಮಿಳುನಾಡಿನ ಕೊಯಂಬತೂರ್ ನಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು .1957 ಒಕ್ಟೋಬರ್ 20 ರಂದು ತಮಿಳುನಾಡಿನ ತಿರುಪ್ಪೂರ್ ನಲ್ಲಿ ಜನಿಸಿದ ಇವರು 1970 ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದರು.
2023 ರಲ್ಲಿ ಇವರನ್ನು ರಾಜ್ಯಪಾಲರನ್ನಾಗಿ ನೇಮಿಸಲಾಯಿತು.NDA ಗೆ ಸಂಸತ್ತಿನ ಉಭಯ ಸದನಗಳಲ್ಲಿ ಸ್ಪಷ್ಟ ಬಹುಮತ ಇರುವುದರಿಂದ ಇವರ ಆಯ್ಕೆ ಬಹುತೇಕ ಖಚಿತವಾಗಿದೆ.ಇಂತಹ ಸಾಂವಿಧಾನಿಕ ಉನ್ನತ ಹುದ್ದೆ ಗಳು ಅವಿರೋಧವಾಗಿ ಆಯ್ಕೆಯಾಗುವುದು ಸದನದ ಸಂಪ್ರದಾಯ ಮತ್ತು ರೂಡಿ ಯಾಗಿದೆ .ಆದರೆ ಇತ್ತೀಚ್ಚಿನ ವರ್ಷ ಗಳಲ್ಲಿ ಈ ಸಂಪ್ರದಾಯ ಮರೆಯಾಗಿದ್ದು ರಾಜಕೀಯ ಜಿದ್ದಾ ಜಿದ್ದಿನ ಕಣವಾಗಿ ಮಾರ್ಪಾಡಾಗುತಿದೆ .ಈ ತನಕ ವಿರೋಧ ಪಕ್ಷ ಒಕ್ಕೂಟವಾದ INDA ಯಾವುದೇ ತೀರ್ಮಾನ ಮಾಡದಿದ್ದರೂ NDA ಅಭ್ಯರ್ಥಿ ಗೆಲುವಿನ ಮ್ಯಾಜಿಕ್ ಸಂಖ್ಯೆ 394 ಸುಲಭವಾಗಿ ದಾಟಬಹುದು .
✍️SURESH MANGALPADY