ಉಪ್ಪಳ : ಭಾರತ್ ಸೇವಕ್ ಸಮಾಜ್ ನ 73 ನೇ ಸ್ಥಾಪಕ ದಿನಾಚರಣೆಯು ತಿರುವನಂತಪುರದ ಟಾಗೋರ್ ಸಭಾಂಗಣದಲ್ಲಿ ಇತ್ತಿಚ್ಚೆಗೆ ನಡೆಯಿತು. ಸಮಾರಂಭದಲ್ಲಿ ವಿದ್ಯಾರ್ಥಿಗಳ ಸರ್ವೋತುಮುಖ ಅಭಿವೃದ್ಧಿಗೆ ಪ್ರಾಧಾನ್ಯತೆಯನ್ನು ನೀಡಿ ಅತ್ಯುತ್ತಮ ಶಿಕ್ಷಣ ನೀಡುತ್ತಿರುವ ಉಪ್ಪಳದ ನ್ಯೂ ಭಾರತ್ ಸಂಸ್ಥೆಗೆ ಅತ್ಯುತ್ತಮ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲ ರಘುಕುಮಾರ್ ಪ್ರಶಸ್ತಿ ಸ್ವೀಕರಿಸಿದರು.
ನಿರಂತರ ಮೂರು ವರ್ಷಗಳಿಂದ ಈ ಸಂಸ್ಥೆಯು ಈ ಪ್ರಶಸ್ತಿಯನ್ನು ಪಡೆಯುತ್ತಿವೆ. ಸಮಾರಂಭವನ್ನು ಪದ್ಮ ವಿಭೂಷಣ ಶ್ರೀ ಅಡೂರು ಗೋಪಾಲ ಕೃಷ್ಣನ್ ಉದ್ಘಾಟಿಸಿದರು. ಭಾರತ್ ಸೇವಾ ಸಮಾಜ್ ನ ರಾಷ್ಟೀಯ ಕಾರ್ಯದರ್ಶಿ ಬಿ ಎಸ್ ಬಾಲಚಂದ್ರನ್ ಅಧ್ಯಕ್ಷತೆ ವಹಿಸಿದ್ದರು.ಕೇಂದ್ರದ ಮಾಜಿ ಸಚಿವ ವಿ. ಮುರಳೀಧರನ್ , ಎಂ .ಎಂ ಹಾಸನ್ ,ಎಂ ವಿಜಯ್ ಕುಮಾರ್ , ರಮೇಶ್ ಎಲಾಮೋನ್ ನಂಬೋದಾರಿ , ಮುಂತಾದವರು ಕಾರ್ಯಕ್ರಮಕ್ಕೆ ಶುಭಾಂಶನೇ ಗೈದರು. ಬಿ.ಎಸ್,ಎಸ್ ನ ಪ್ರಧಾನ್ ಕಾರ್ಯದರ್ಶಿ ಶ್ರೀಮತಿ ಜಯ ಶ್ರೀಕುಮಾರ್ ಸ್ವಾಗತಿಸಿ ಮಂಜು ಶ್ರೀಕಂಠನ್ ವಂದಿಸಿದರು. ದೇಶಾದ್ಯಂತ ಸುಮಾರು 15 ,000 ಸಂಸ್ಥೆಗಳನ್ನು ಹೊಂದಿರುವ ಬಿ,ಎಸ್, ಎಸ್, ಅತ್ಯತ್ತಮ ಶಿಕ್ಷಣ ನೀಡಿದ ಸುಮಾರು 160 ಸಂಸ್ಥೆಗಳಿಗೆ ಅತ್ಯುತ್ತಮ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಿ ಅಭಿನಂದಿಸಲಾಗಿದೆ.
1952 ರಲ್ಲಿ ಪಂಡಿತ್ ಜವಹರಲಾಲ್ ನೆಹರು ಭಾರತ್ ಸೇವಕ್ ಸಮಾಜ್ ನ್ನು ಸಂಸತ್ತಿನಲ್ಲಿ ವಿಶೇಷ ಕಾಯಿದೆಯ ಮುಳ್ಕ ಆರಂಭಿಸಿದರು .
ನಿರದ್ಯೋಗ ನಿವಾರಣೆ , ಸ್ವಾವಲಂಬಿ ಜೀವನ ಅತ್ಯುತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಇದನ್ನು ಆರಂಭಿಸಿದರು.