ಮಂಜೇಶ್ವರ : ನಾಯಿ ಹಾವಳಿ ವಿಪರೀತವಾಗಿದ್ದು ಕಡಿದು ಗಾಯಗೊಳಿಸುತ್ತಿರುವ ಬಗ್ಗೆ ಆಗಾಗ ವರದಿಯಾಗುತ್ತಿದೆ.
ಮಂಗಳವಾರ ಸಂಜೆ ಮದ್ರಸಕ್ಕೆ ತೆರಳುತಿದ್ದ 8 ವರ್ಷದ ಬಾಲಕನೊಬ್ಬನಿಗೆ ಬೀದಿ ನಾಯಿಯೊಂದು ಅಟ್ಟಾಡಿಸಿ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದೆ.
ಮಂಜೇಶ್ವರ ರಿಜಿಸ್ಟ್ಟಾರ್ ಕಚೇರಿ ಪರಿಸರವಾಸಿ ರಶೀದ್ ಎಂಬವರ ಪುತ್ರ ಅಬೂಬಕ್ಕರ್ ರಫಾನ್ (8) ಎಂಬಾತನನ್ನು ನಾಯಿ ಕಚ್ಚಿ ಗಂಭೀರ ಗಾಯಗೊಳಿಸಿದೆ.
ಬಾಲಕನ ಬೊಬ್ಬೆ ಕೇಳಿ ಜನ ಸೇರುವಾಗ ನಾಯಿ ಬಾಲಕನನ್ನು ಬಿಟ್ಟು ಓಡಿದೆ. ಬಳಿಕ ಬಾಲಕನನ್ನು ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳು ಬೀದಿ ನಾಯಿಗಳ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.