ಮಿಯಪದವು : ಟೀಚರ್ಸ್ ಸ್ಪೋರ್ಟ್ಸ್ ಕೌನ್ಸಿಲ್ ಕಾಸರಗೋಡು ಇದರ ನೇತೃತ್ವದಲ್ಲಿ ದಿವಂಗತ ಅಧ್ಯಾಪಕ ಪ್ರಶಾಂತ್ ರೈ ಅವರ ಸ್ಮರಣಾರ್ಥ ಇಂಡಿಪೆಂಡೆನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾಟ ಮೀಯಪದವು ಶಾಲಾ ಮೈದಾನದಲ್ಲಿ ಜರಗಿತು.
ಪಂದ್ಯಾಟವನ್ನು ಮೀಯಪದವು ಯು ಪಿ ಶಾಲಾ ಮುಖ್ಯೋಪಾಧ್ಯಾಯರಾದ ಅರವಿಂದಾಕ್ಷ ಭಂಡಾರಿ ಉದ್ಘಾಟಿಸಿದರು. ಟಿ ಎಸ್ಸಿ ಯ ಅಧ್ಯಕ್ಷರಾದ ಸಂಜೀವ ಸಿ ಎಚ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರುಗಳಾದ ಉದಯ್ ಸಾರಂಗ್ ಮತ್ತು ಸದಾಶಿವ ಬಾಲಮಿತ್ರ,ಜತೆ ಕಾರ್ಯದರ್ಶಿ ರಘುವೀರ್ ಉಪಸ್ಥಿತರಿದ್ದರು. ಟಿ ಎಸ್ಸಿ ಕಾರ್ಯದರ್ಶಿ ಪ್ರಶಾಂತ್ ಕುಂಟಿಕಾನ ಸ್ವಾಗತಿಸಿ ,ಜತೆ ಕಾರ್ಯದರ್ಶಿ ವಸಂತ ಮೂಡ0ಬೈಲ್ ಕಾರ್ಯಕ್ರಮ ನಿರೂಪಿಸಿದರು.ಸಂಜೆ ಜರಗಿದ ಬಹುಮಾನ ವಿತರಣೆ ಸಮಾರಂಭದಲ್ಲಿ ಟಿ ಎಸ್ಸಿ ಅಧ್ಯಕ್ಷರಾದ ಸಂಜೀವ ಸಿ ಎಚ್ ಅಧ್ಯಕ್ಷತೆ ವಹಿಸಿದರು. ಟಿ ಎಸ್ಸಿ ಪದಾಧಿಕಾರಿಗಳಾದ ಅಶೋಕ್ ಕೊಡ್ಲಮೊಗರು,ಅನಿಲ್ , ನಿರಂಜನ್ ರೈ ಪೆರಡಾಳ,ಇಸ್ಮಾಯಿಲ್ ಮಾಸ್ತರ್ ಉಪಸ್ಥಿತರಿದ್ದರು.
ಪಂದ್ಯಾಟದಲ್ಲಿ ಚಾಂಪಿಯನ್ ಆದ ಜೈ ಹೊ ಮಾಸ್ಟರ್ಸ್ ಕುಂಬಳೆ ಹಾಗೂ ದ್ವಿತೀಯ ಸ್ಥಾನ ಪಡೆದ ರಂಗ ಸಂಗಮ ಕುಂಬಳೆ ತಂಡಕ್ಕೆ ಸ್ಮರಣಿಕೆಗಳನ್ನು ನೀಡಿ ಅಭಿನಂದಿಸಲಾಯಿತು.