ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡಿದ 8 ರ ಹರೆಯದ ರುಷಬ್ ರಾವ್ ಕರಾವಳಿಗೆ ಹೆಮ್ಮೆ.

ಮಂಗಳೂರು: ಆಗಸ್ಟ್ 13 ರಿಂದ 17 ರ ವರೆಗೆ ವಿಯೆಟ್ನಾಂ ನಲ್ಲಿ ನಡೆದ ಅಂತರಾಷ್ಟ್ರೀಯ ಫ್ಯಾಷನ್ ಶೋ ಸ್ಪರ್ಧೆಯಲ್ಲಿ
ಭಾರತವನ್ನು ಪ್ರತಿನಿಧಿಸಿ Prince Category ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸುವುದರೊಂದಿಗೆ “ಸೂಪರ್ ಟ್ಯಾಲೆಂಟ್ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡು ಭಾರತವನ್ನು ಜಾಗತಿಕ ಮಟ್ಟದಲ್ಲಿ ಗಮನಸೆಳೆಯುವಂತೆ ಮಾಡಿದ 8 ರ ಹರೆಯದ ರುಷಬ್ ರಾವ್ ಕರಾವಳಿಗೆ ಹೆಮ್ಮೆ ತಂದಿದ್ದಾನೆ ಎಂದು ವಿಜೇತನ ಆಪ್ತರಾದ ರಾಹುಲ್ ಅಮೀನ್ ತಿಳಿಸಿದರು.

ಅವರು ನಗರದ ಪತ್ರಿಕಾ ಭವನದಲ್ಲಿ ಮಾತನಾಡಿ, ರುಶಬ್ ಪ್ರತಿಭೆಯನ್ನು ಅತೀ ಹತ್ತಿರದಲ್ಲಿ ಕಂಡವನು ನಾನು, ಪಠ್ಯಕ್ಕೆ ಮಹತ್ವವನ್ನು ನೀಡುವ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಮಕ್ಕಳನ್ನು ಪ್ರೋತ್ಸಾಹಿಸಬೇಕು.

ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಕನ ತಂದೆ ರಕ್ಷಿತ್, ಎಲ್ಲಾ ಮಕ್ಕಳಿಗೆ ಅವರದ್ದೇ ಆದ ಪ್ರತಿಭೆಗಳಿರುತ್ತದೆ. ಅದಕ್ಕೆ ಅವಕಾಶವನ್ನು ನೀಡಬೇಕು. ಇಂದು ನನ್ನ ಮಗು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿರುವುದು ಇತರರಿಗೂ ಸ್ಪೂರ್ತಿಯನ್ನು ನೀಡುವಂಥದ್ದು. ಕಲಿಕೆಯ ಜೊತೆಗೆ ಕಲೆಗೂ ಬೆಲೆ ನೀಡಬೇಕು. ಈ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ವಿವಿಧ 22 ದೇಶಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ಅದರಲ್ಲಿ ನನ್ನ ಮಗನಿಗೆ ಪ್ರಥಮ ಸ್ಥಾನ ಸಿಕ್ಕಿರುವುದು ಸಂತಸವನ್ನು ತಂದಿದೆ.ಸುದ್ದಿಗೋಷ್ಠಿಯಲ್ಲಿ ರುಶಬ್ ರಾವ್, ವರ್ಷಾ ವಿ ಆಚಾರ್ಯ, ಅಶ್ವಿನಿ, ಯಶಸ್ವಿನಿ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!