ಯೂಟ್ಯೂಬರ್ ಶಮೀರ್ ಎಂ ಡಿ ಬಂಧನದ ವಿಳಂಭಕ್ಕೆ ಕಾರಣ ಸರಕಾರ -ಸತೀಶ್ ಕುಂಪಲ

ಮಂಗಳೂರು:ಯೂಟ್ಯೂಬರ್ ಶಮೀರ್ ಎಂ ಡಿ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪ್ರಚಾರ ಮಾಡಿದ ದಿನವೇ ಆತನನ್ನು ಬಂಧಿಸಬೇಕಿತ್ತು. ಆದರೆ ಸರಕಾರ ಅನುಸರಿಸಿದ ಮೆದು ನೀತಿಯು ಆತನನ್ನು ಬಂಧಿಸಲಿಲ್ಲ . ಸರಕಾರ ಈ ಕೂಡಲೇ ಆತನನ್ನು ಬಂಧಿಸಬೇಕೆಂದು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆಗ್ರಹಿಸಿದರು.

ಅವರು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಮಾತನಾಡಿ, ಧರ್ಮಸ್ಥಳದ ಬಗ್ಗೆ ಇಂದು ಅಪ್ರಾಚಾರಗಳು ಹರಿದಾಡುತ್ತಿದೆ . ಈ ಎಲ್ಲಾ ಷಡ್ಯಂತರವು ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನು ತರುವಂಥದ್ದು. ಈ ಮೊದಲು ಶಬರಿಮಲೆ ದೇವಾಲಯದ ಪಾವಿತ್ರತೆಗೆ ಮಸಿ ಬಳಿಯುವ ಕೆಲಸವನ್ನು ಮಾಡಲಾಗಿತ್ತು. ಇದೀಗ ಧರ್ಮಸ್ಥಳ ಕ್ಷೇತ್ರದ ಘನತೆಯನ್ನು ಕುಗ್ಗಿಸುವಂತಹ ಕೆಲಸ ಮಾಡಲಾಗುತ್ತಿದೆ. ಈ ಷಡ್ಯಂತರದ ಹಿಂದೆ ಕೆಲವು ಸಂಘಟನೆಯ ಪಾತ್ರಗಳು ಕೂಡ ಇದೆ . ಶಮೀರ್ ಎಂಬಾತನನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು . ಧರ್ಮಸ್ಥಳದ ಪಾವಿತ್ರತೆಯನ್ನು ಕಾಪಾಡುವ ಸಲುವಾಗಿ ಸೆಪ್ಟೆಂಬರ್ ೧ ರಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಲಕ್ಷಾಂತರ ಸಂಖ್ಯೆಯ ಕಾರ್ಯಕರ್ತರು , ರಾಜಕೀಯ ಮುಖಂಡರು ಧರ್ಮಸ್ಥಳ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ .

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾದ ಡಾ. ವೈ. ಭರತ್ ಶೆಟ್ಟಿ , ಪ್ರೇಮಾನಂದ ಶೆಟ್ಟಿ , ಸಂಜಯ್ ಪ್ರಭು ಮುಂತಾದವರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!