ಎಡಬಿಡದೆ ಸುರಿಯುತ್ತಿರುವ ವರುಣಾರ್ಭಟ-ಕಾಸರಗೋಡಿನ ಮಧೂರು ಶ್ರೀ ಸಿದ್ದಿ ವಿನಾಯಕ ಕ್ಷೇತ್ರ ಸಂಪೂರ್ಣ ಜಲಾಮಯ

ಕಾಸರಗೋಡು: ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ವರುಣಾರ್ಭಟಕ್ಕೆ ಕಾಸರಗೋಡಿನ ಮಧೂರು ಶ್ರೀ ಸಿದ್ದಿ ವಿನಾಯಕ ಕ್ಷೇತ್ರ ಸಂಪೂರ್ಣ ಜಲಾಮಯವಾಗಿದೆ . ಈ ಮೂಲಕ ಸತತ ಮೂರನೇ ಬಾರಿಗೆ ಮಳೆಯಿಂದ ಮಧು ವಾಹಿನಿ ನದಿ ಉಕ್ಕೇರಿ ಹರಿದು ದೇವಾಲಯ ಜಲಾಮಯವಾಗಿದೆ . ಮಳೆಯಿಂದಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಕೊಂಚ ಮಟ್ಟಿಗೆ ಕಿರಿಕಿರಿಯನ್ನೇ ಉಂಟು ಮಾಡಿದೆ .

ಹೀಗಾಗಿ ದೇವಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಇಳಿಮುಖ ಕಂಡಿತ್ತು . ಆದ್ರೆ ಇದೀಗ ಮಳೆ ಆರ್ಭಟ ಕಮ್ಮಿಯಾಗಿದ್ದು ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವನ್ನು ನೋಡಬಹುದಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!