ಕಾಲುವೆಯಲ್ಲಿ ನೀರಿನ ಹರಿವಿಗೆ ಸಿಲುಕಿ ಆರನೇ ತರಗತಿ ವಿದ್ಯಾರ್ಥಿಯ ದಾರುಣ ಅಂತ್ಯ

ಕಾಸರಗೋಡು : ಚೆರ್ಕಳ ಪಾಡಿಯಲ್ಲಿ ಆರನೇ ತರಗತಿ ವಿದ್ಯಾರ್ಥಿಯೊಬ್ಬ ನೀರಿನ ಹರಿವಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾನೆ.
ಮುಟ್ಟತ್ತೋಡಿ ಗ್ರಾಮದ ಕಲ್ಲಕಟ್ಟ ಬೆಳ್ಳೂರಡ್ಕ ನಿವಾಸಿ ಹಸೈನಾರ್ ಎಂಬವರ ಪುತ್ರ ಮಿತ್ಲಾಜ್ (11) ಸಾವನ್ನಪ್ಪಿದ ದುರ್ದೈವಿ.
ಈತ ಆಲಂಪಾಡಿ ಶಾಲೆಯ 6 ನೇ ತರಗತಿ ವಿದ್ಯಾರ್ಥಿ.
ಶನಿವಾರ ಸಂಜೆ ಶಾಲೆಯ ಸಹಪಾಠಿಗಳೊಂದಿಗೆ ಕಾಲುವೆಯಲ್ಲಿ ಸ್ನಾನಕ್ಕೆ ಹೋಗಿರುವುದಾಗಿ ಪ್ರಾಥಮಿಕ ಮಾಹಿತಿ. ಈ ಸಂದರ್ಭ ನೀರಿನ ಹರಿವಿಗೆ ಸಿಲುಕಿ ಈ ದುರ್ಘಟನೆ ಸಂಭವಿಸಿದೆ.
ವಿದ್ಯಾನಗರ ಪೊಲೀಸರು ಹಾಗೂ ಅಗ್ನಿಶಾಮಕ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಬಾಲಕನ ಶವ ಶರೀರವನ್ನು ಪತ್ತೆ ಹಚ್ಚಲಾಯಿತು. ಶವಶರೀರವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!