ಕುಂಬಳೆ: ಚಿರಂಜೀವಿ (ರಿ.) ಕುಂಬಳೆ ಸಂಸ್ಥೆ ವತಿಯಿಂದ ಭಾನುವಾರ ಬೆಳಿಗ್ಗೆ 10 ಗಂಟೆಗೆ “ಆಟಿದ ಒಂಜಿ ದಿನ” ವಿಶೇಷ ಕಾರ್ಯಕ್ರಮವು ಸಂಭ್ರಮ ಹಾಗೂ ಸಡಗರದಿಂದ ನಡೆಯಿತು.


ಕಾರ್ಯಕ್ರಮದಲ್ಲಿ ಕ್ಲಬ್ಬಿನ ಸದಸ್ಯರು ತಮ್ಮ ಮನೆಗಳಲ್ಲಿ ತಯಾರಿಸಿದ ವಿವಿಧ ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನು ತಯಾರಿಸಿ ಪರಸ್ಪರ ಹಂಚಿಕೊಂಡು ಸವಿಯುವ ಮೂಲಕ ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಪರಸ್ಪರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದರು.


ಕಾರ್ಯಕ್ರಮದ ವಿಶೇಷ ಅತಿಥಿಗಳಾದ ದಿವ್ಯ ಗಟ್ಟಿ ಪರಕ್ಕಿಲ ಹಾಗೂ ರವಿ ನಾಯ್ಕಪು ಅವರು ಆಟಿದ ಒಂಜಿ ದಿನದ ಮಹತ್ವ, ಅದರ ಸಾಂಸ್ಕೃತಿಕ ಹಿನ್ನೆಲೆ ಹಾಗೂ ಇಂದಿನ ಪೀಳಿಗೆಗೆ ಇಂತಹ ಆಚರಣೆಗಳ ಅಗತ್ಯತೆಯ ಕುರಿತು ಮಾಹಿತಿ ನೀಡಿದರು. ಬಳಿಕ ಸದಸ್ಯರು ಹಾಗೂ ಕುಟುಂಬಸ್ಥರಿಗಾಗಿ ವಿವಿಧ ಮನರಂಜನಾ ಆಟೋಟ ಸ್ಪರ್ಧೆಗಳು ಆಯೋಜಿಸಲಾಗಿದ್ದು, ಎಲ್ಲರೂ ಉತ್ಸಾಹದಿಂದ ಭಾಗವಹಿಸಿದರು.

ಕ್ಲಬ್ಬಿನ ಎಲ್ಲಾ ಸದಸ್ಯರು ಹಾಗೂ ಕುಟುಂಬಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಚಿರಂಜೀವಿ (ರಿ.) ಕುಂಬಳೆ ಕ್ಲಬ್ನ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಗಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಉಪಾಧ್ಯಕ್ಷ *ಕೆ.ಸಿ. ಮೋಹನ್, ಕಾರ್ಯದರ್ಶಿ **ಕೃಷ್ಣ ಕುಂಬಳೆ, ಜಂಟಿ ಕಾರ್ಯದರ್ಶಿ **ಕಿರಣ್ ಪೂಜಾರಿ, ಖಜಾಂಚಿ *ಗೋಪಿ ಹಾಗೂ ಸಂಯೋಜಕರಾದ ನವೀನ್ ಗಟ್ಟಿ, ಪ್ರಜೇಶ್ ಪೆರ್ವಾಡ್, ರಾಜೇಶ್ ದೇವಿನಗರ, ಮಹೇಶ್ವರನ್, ಶಿವಾನಂದ ಭಂಡಾರಿ ಮತ್ತು ಸಂತೋಷ್ (ಬಟ್ಟುನ್ಹಿ ಟ್ರೇಡರ್ಸ್) ಜಗದೀಶ್ ಭಂಡಾರಿ , ಕಿಶೋರ್ ಭಂಡಾರಿ, ರತ್ನಾಕರ ರೈ ಕುಂಡಪು, ವಿಶ್ವನಾಥ್ ಭಂಡಾರಿ ಅವರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.
ಮಹಿಳಾ ಘಟಕದ ಅಧ್ಯಕ್ಷೆ *ಗೀತಾ, ಉಪಾಧ್ಯಕ್ಷೆ **ಚಂದ್ರಾವತಿ, ಕಾರ್ಯದರ್ಶಿ ಸಂದ್ಯಾ ರಾಜೇಶ್, ಜಂಟಿ ಕಾರ್ಯದರ್ಶಿ *ಮಮತಾ ಕುಲಾಲ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಮಾಲತಿ, ಲೀಲಾವತಿ ಮತ್ತು ಜಲಜ ಟೀಚರ್, ಪೂರ್ಣಿಮ ಕಿಶೋರ್, ನಳಿನಿ ಕೋಟೆಕಾರ್, ಸುನಿತಾ ದೇವಿನಗರ, ಶಶಿಪ್ರಭಾ ಬಂಡಾರಿ, ಸರಿತಾ ಟೀಚರ್ ಅವರು ಕಾರ್ಯಕ್ರಮದ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

