ಸೆಪ್ಟೆಂಬರ್ 27ರಂದು ಪಿ.ಎ. ಪುಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ ‘ಕನ್‌ವರ್ಜೆನ್ಸ್‌ 2025’ ಕಾರ್ಯಕ್ರಮ

ಮಂಗಳೂರು: ಪಿ.ಎ.ಪ್ರಥಮ ದರ್ಜೆ ಕಾಲೇಜು ಮತ್ತು ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಅಂಡ್ ರಿಸರ್ಚ್, ಪಿ.ಎ. ಕಾಲೇಜು ಆಫ್ ಎಂಜಿನಿಯರಿಂಗ್, ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ)ಇವರ ಸಹಯೋಗದೊಂದಿಗೆ ಸುಸ್ಥಿರ ಭವಿಷ್ಯದ ಕೃತಕ ಬುದ್ಧಿಮತ್ತೆಯ ಅಂತಾರಾಷ್ಟ್ರೀಯ ಸಮ್ಮೇಳನವಾದ ‘ಕನ್‌ವರ್ಜೆನ್ಸ್‌ 2025’ ಕಾರ್ಯಕ್ರಮವು ನಡುಪದವಿನ ಪಿ.ಎ. ಪುಥಮ ದರ್ಜೆ ಕಾಲೇಜಿನಲ್ಲಿ ಸೆಪ್ಟೆಂಬರ್ 27ರಂದು ನಡೆಯಲಿದೆ ಎಂದು ಪಿ.ಎ.ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ ಸರ್ಫ್ರಾಜ್ ಜೆ ಹಾಸಿಂ ತಿಳಿಸಿದರು .

ಅವರು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಸಮ್ಮೇಳನದನದಲ್ಲಿ ವಿದ್ವಾಂಸರು , ಉದ್ಯಮ ತಜ್ಞರು ಸಂಶೋಧರು ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ . ಅವರು ಕೃತಕ ಬುದ್ಧಿಮತ್ತೆ ಆವಿಷ್ಕಾರಗಳನ್ನು ಹೇಗೆ ಮುನ್ನಡೆಸಬಹುದು ಮತ್ತು ಯುನೈಟೆಡ್ ನೇಷನ್ಸ್ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಹೇಗೆ ಸಹಕಾರಿಯಾಗಬಹುದು ಎಂಬುದರ ಚರ್ಚೆಯಲ್ಲಿ ಪಾಲ್ಗೊಳಲಿದ್ದಾರೆ .

ಬಹ್ಮನ್‌ ಕಿಂಗ್‌ಡಮ್ ಯೂನಿವರ್ಸಿಟಿ ಪ್ರೊ. ಇಸ್ಮಾಯಿಲ್ ತೋನ್ನ ಹವಾಲ್ದಾರ್ ಹಾಗೂ ಯುಎಇಯ ವೆನ್ಯೂರ್ಡ್ ಎಚ್.ಇ. ಅಸೋಸಿಯೇಟ್ ಡೀನ್ ಡಾ. ಸೂಫಿ ಅನ್ಸರ್ ಪ್ರಮುಖ ಭಾಷಣ ಮಾಡಲಿದ್ದಾರೆ.

ಸಮ್ಮೇಳದಲ್ಲಿ ಮಾನವ ಸಂಪನ್ಮೂಲ ನಿರ್ವಹಣೆ , ಮಾರ್ಕೆಟಿಂಗ್ ಮತ್ತು ಗ್ರಾಹಕರ ವರ್ತನೆ , ಹಣಕಾಸು ಮತ್ತು ಫಿನ್‌ಟೆಕ್ , ಆಹಾರ ಪೋಷಣೆ ಹಾಗೂ ಸಾರ್ವಜನಿಕ ಆರೋಗ್ಯ , ಕಂಪ್ಯೂಟ‌ರ್ ಅಪ್ಲಿಕೇಶನ್‌ಗಳು ಮತ್ತು ಹೊಸ ತಂತ್ರಜ್ಞಾನಗಳ ಕುರಿತು ಚರ್ಚೆಗಳು ಪ್ರತ್ಯೇಕವಾಗಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಡಾ. ಸಯ್ಯದ್ ಅಮೀನ್ ಅಹಮ್ಮದ್, ವಾಣಿಶ್ರೀ, ಮೊಹಮ್ಮದ್ ಆಸಿಫ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!