ಮಂಗಳೂರು:
ಜೀವನದ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಧ್ಯಾನಯೋಗದ ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೇ ಹಿನ್ನೆಲೆಯಲ್ಲಿ “ಉತ್ತಮ ಜೀವನ ನಿರ್ವಹಣೆಗಾಗಿ ಹಿಮಾಲಯದ ಧ್ಯಾನಯೋಗ” ಎಂಬ ವಿಷಯದ ಕುರಿತು ಪರಮ ವಂದನೀಯ ಗುರುಮಾ ಅವರಿಂದ ವಿಶೇಷ ಪ್ರವಚನ ಮಂಗಳೂರಿನಲ್ಲಿ ನಡೆಯಲಿದೆ ಎಂದು ಆಯೋಜಕರಾದ ಚಂದ್ರಶೇಖರ ತಿಳಿಸಿದರು .
ನಗರದ ಪತ್ರಿಕಾಭವನದಲ್ಲಿ ಮಾತಾಡಿದ ಅವರು, ಸೆಪ್ಟೆಂಬರ್ 9, 2025 ರಂದು ಸಂಜೆ 5 ಗಂಟೆಗೆ ಮಣ್ಣಗುಡ್ಡೆಯ ಸಂಘನಿಕೇತನ ಸಭಾಂಗಣದಲ್ಲಿ ಈ ಕಾರ್ಯಕ್ರಮ ಆಯೋಜನೆಯಾಗಲಿದ್ದು, ಎಲ್ಲಾ ವಯಸ್ಸಿನ ಜನರಿಗೆ ಮುಕ್ತವಾಗಿದೆ ಎಂದರು.
ಹಿಮಾಲಯ ಧ್ಯಾನಯೋಗ ಸಂಸ್ಥಾಪಕ ಸದ್ಗುರು ಶಿವಕ್ಷವಾನಂದ ಸ್ವಾಮೀಜಿ, ಅನೇಕ ವರ್ಷಗಳ ಹಿಮಾಲಯ ಸಾಧನೆಯ ಬಳಿಕ ಆತ್ಮಸಾಕ್ಷಾತ್ಕಾರವನ್ನು ಪಡೆದವರು. ಕಳೆದ 25 ವರ್ಷಗಳಿಂದ ಅವರು ಸಮಾಜಕ್ಕೆ ಧ್ಯಾನದ ಗಹನ ಜ್ಞಾನ ಹಂಚುತ್ತಿದ್ದಾರೆ. ಈ ಜ್ಞಾನವನ್ನು ಮೊತ್ತಮೊದಲು ತಮ್ಮ ಧರ್ಮಪತ್ನಿ ಹಾಗೂ ಶಿಷ್ಯಾದ ಗುರುಮಾಗೆ ನೀಡಿದ್ದರು.
ಸ್ವಾಮೀಜಿ ತಮ್ಮ ಆಧ್ಯಾತ್ಮಿಕ ಪಯಣದಲ್ಲಿ ತಮ್ಮ ಗುರು ಶಿವಬಾಬಾ ಹಾಗೂ ಗುರುಮಾರವರ ಕೊಡುಗೆಯನ್ನು ಮಹತ್ವದೊಂದಿಗೆ ಉಲ್ಲೇಖಿಸುತ್ತಾರೆ ಎಂದು ಚಂದ್ರಶೇಖರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಕಂದ್ ಕಾರ್ತಿಕ್, ಮಮತಾ, ದಿನ ಶುಕ್ಲ, ಮುಂತಾದವರು ಉಪಸ್ಥಿತರಿದ್ದರು.