ಕುಡುಬಿ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಕೂಡಲೇ ಕೇಂದ್ರ ಸರಕಾರ ಸೇರಿಸಬೇಕು – ವಿಧಾನ ಪರಿಷತ್ ನ ಶಾಸಕರಾದ ಐವನ್ ಡಿಸೋಜ

ಕುಡುಬಿ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಕೂಡಲೇ ಕೇಂದ್ರ ಸರಕಾರ ಸೇರಿಸಬೇಕೆಂದು ವಿಧಾನ ಪರಿಷತ್ ನ ಶಾಸಕರಾದ ಐವನ್ ಡಿಸೋಜ ತಿಳಿಸಿದರು .

ಅವರು ಮನಪಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ , ಕುಡುಬಿ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಕೂಡಲೇ ಸೇರಿಸುವ ಬಗ್ಗೆ ದಕ್ಷಿಣ ಕನ್ನಡ ಸಂಸದರು ಪಾರ್ಲಿಮೆಂಟ್ ನಲ್ಲಿ ಕೇಂದ್ರ ಸಾಮಾಜಿಕ ಅಭಿವೃದ್ಧಿ ಮಂತ್ರಿಗಳಲ್ಲಿ ಪ್ರಶ್ನೆಯನ್ನು ಕೇಳುತ್ತಾರೆ . ಆಗ ರಾಜ್ಯದಿಂದ ಯಾವುದೇ ಶಿಫಾರಸ್ಸು ಬಂದಿಲ್ಲ ಎಂದು ಸಿಗುತ್ತೆ .

ಅನುಚ್ಛೇದ ೩೪೧ (೨) ಪ್ರಕಾರ ಕೇಂದ್ರ ಸರ್ಕಾರಕ್ಕೆ ಯಾವುದೇ ಹೊಸ ಜಾತಿಯನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಅಧಿಕಾರ ಸಂಸತ್ ಗೆ ಇದೆ . ಆದರೆ ಸಂವಿಧಾನದ ಅನುಚ್ಛೇದ 341 (1) ಪ್ರಕಾರ ರಾಜ್ಯ ಸರಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಅಧಿಕಾರವನ್ನು ಹೊಂದಿರುತ್ತದೆ .

ಪ್ರಸ್ತುತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಕುಡುಬಿ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಲು ಯಾವುದೇ ಆಕ್ಷೇಪಣೆ ಇರುವುದಿಲ್ಲ ಎಂದು ದಿನಾಂಕ:11-07-2025ರಂದು ಅಭಿಪ್ರಾಯ ನೀಡಿರುತ್ತಾರೆ. ಅದರಂತೆ ಕುಡುಬಿ ಸಮುದಾಯವನ್ನು ಕರ್ನಾಟಕ ರಾಜ್ಯದ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಕುರಿತು ಪರಿಶೀಲಿಸಿ ಮುಂದಿನ ಕ್ರಮವನ್ನು ಜರುಗಿಸಲಾಗುವುದು. ಕುಡುಬಿ ಸಮುದಾಯವನ್ನು ಆದಷ್ಟು ಬೇಗನೆ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿ ಅವರಿಗೆ ಉದ್ಯೋಗ , ಉದ್ಯಮದ , ಇನ್ನಿತ್ತರ ಸವಾಲುಗಳನ್ನು ಸಿಗುವ ಸಾಧ್ಯತೆ ಇದರಿಂದ ಈಡೇರಲಿದೆ.

ಸುದ್ದಿಗೋಷ್ಠಿಯಲ್ಲಿ ಶಶಿಧರ್ ಹೆಗ್ಡೆ , ನಾಗೇಂದ್ರ , ಶೇಖರ್ , ಪಯಾಸ್ ಬೆಂಗ್ರೆ , ಭಾಸ್ಕರ್ ರಾವ್ ಮುಂತಾದವರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!