“ಕಮ್ಯೂನಿಟಿ ಯೂತ್ ಲೀಡರ್ಸ್ ಮೀಟ್ 2025 ” ಕಾರ್ಯಕ್ರಮ ಸೆ. 12 ರಂದು.

ಮಂಗಳೂರು: ಯುನೈಟೆಡ್ ಎಂಪವರ್‌ಮೆಂಟ್ ಅಸೋಸಿಯೇಶನ್ ರಾಜ್ಯ ಸಮಿತಿ ವತಿಯಿಂದ ಯುವ ನಾಯಕತ್ವ, ವೃತ್ತಿ ಮಾರ್ಗದರ್ಶನ ಮತ್ತು ಉತ್ತಮ ಸಮಾಜ ನಿರ್ಮಾಣದಲ್ಲಿ ಯುವಕರ ಪಾಲ್ಗೊಳ್ಳುವಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ದಿನಾಂಕ 12/09/2025 ನೇ ಶುಕ್ರವಾರ ಸಂಜೆ ಮಂಗಳೂರಿನ ಇಂಡಿಯಾನ ಕನ್ನೆನ್ನನ್ ಹಾಲ್‌ನಲ್ಲಿ “ಕಮ್ಯೂನಿಟಿ ಯೂತ್ ಲೀಡರ್ಸ್ ಮೀಟ್ 2025” ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷ ಯು.ಟಿ ಖಾದರ್ ಸೇರಿದಂತೆ ಹಲವಾರು ಸಮುದಾಯದ ಗಣ್ಯರು ಭಾಗವಹಿಸಲಿದ್ದಾರೆ.
ಯುನೈಟೆಡ್ ಎಂಪವ‌ಮೆಂಟ್ ಅಸೋಸಿಯೇಷನ್ (ಯುಇಎ) ಕ್ರೀಡೆಗಳ ಮೂಲಕ ಸಮುದಾಯದ ಸಬಲೀಕರಣ ಮತ್ತು ಅಭಿವೃದ್ಧಿಯತ್ತ ಕೊಂಡುಹೋಗುವ ಸಂಸ್ಥೆಯಾಗಿದೆ.

ಎಲ್ಲಾ ವಿಧದ ಕ್ರೀಡಾಪಟುಗಳನ್ನು ಸಿದ್ಧಪಡಿಸಿ, ಸ್ಪರ್ಧಾತ್ಮಕ ಮಟ್ಟದಲ್ಲಿ ಭಾಗವಹಿಸಲು ಉತ್ತೇಜಿಸುವುದು ಇದರ ಉದ್ದೇಶವಾಗಿದೆ. ಭಾರತೀಯ ಸೊಸೈಟಿ ಕಾಯ್ದೆಯಡಿ ನೋಂದಾಯಿತವಾದ ಈ ಸಂಸ್ಥೆ ಕರ್ನಾಟಕದಲ್ಲಿ ಕ್ರೀಡೆ ಮತ್ತು ಕ್ರೀಡಾಪಟುಗಳನ್ನು ಬೆಳೆಸಲು ಶ್ರಮಿಸುತ್ತಿದೆ. ಕ್ರೀಡಾ ಕ್ಷೇತ್ರದಲ್ಲಿ ಪ್ರಮುಖ ಧ್ವನಿಯಾಗಿ ಹೊರಹೊಮ್ಮಲು ಸಂಸ್ಥೆಯು ಬದ್ಧವಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಈಗಾಗಲೇ ಸುಮಾರು 21 ವಲಯ ಸಮಿತಿ ರಚಿಸಲಾಗಿದ್ದು 7೦೦೦ಕ್ಕೂ ಅಧಿಕ ಸದಸ್ಯರೊಂದಿಗೆ ಕಾರ್ಯನಿರ್ವಹಿಸುತ್ತಿದೆ.ಕ್ರೀಡಾಪಟುಗಳ ಜೀವನದಲ್ಲಿ ಕಾರ್ಯಬದ್ದ ಒಕ್ಕೂಟವನ್ನು ನಿರ್ಮಿಸಿ, ಬೆಳಸಿ, ಮುನ್ನಡೆಸುವ ಗುರಿ ಇಟ್ಟುಕೊಂಡಿದೆ.

ಯುಇಎ ಕ್ರಿಕೆಟ್, ಫುಟ್‌ಬಾಲ್, ವಾಲಿಬಾಲ್, ಕಬಡ್ಡಿ, ಶಟಲ್ ಬ್ಯಾಡ್ಮಿಂಟನ್, ಚೆಸ್, ಕ್ಯಾರಂ, ಟೇಬಲ್ ಟೆನ್ನಿಸ್, ಖೋ-ಖೋ, ತೋ ಬಾಲ್, ಕುಸ್ತಿ, ಕರಾಟೆ, ಜುಡೋ, ಓಟ, ಜಂಪಿಂಗ್, ಪ್ರೋ ಹಾಗೂ ಸ್ನೇಟಿಂಗ್ ಮುಂತಾದ ವಿವಿಧ ಕ್ರೀಡಾಪಟುಗಳ ಪುರೋಗತಿಗಾಗಿ ಶ್ರಮಿಸಲಿದೆ.
ಸಮುದಾಯದ ಪ್ರತಿಯೊಬ್ಬರೂ ಈ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಭವಿಷ್ಯ ರೂಪಿಸುವ ಶಕ್ತಿ ಹೊಂದಿರುವ ನಮ್ಮ ಯುವಕರನ್ನು ಪ್ರೇರೇಪಿಸಲು ಹಾಗೂ ಉತ್ತೇಜಿಸಲು ಈ ಗೋಷ್ಠಿ ಮೂಲಕ ವಿನಂತಿಸುತ್ತಿದ್ದೇನೆ.

ಸುದ್ದಿಗೋಷ್ಠಿಯಲ್ಲಿ
ಸಿರಾಜ್ ಎರ್ಮಾಳು, ಅಧ್ಯಕ್ಷರು, ಯುಇಎ ರಾಜ್ಯ ಸಮಿತಿ
ಇಮ್ರಯಾಜ್ ಗೋಳ್ತಮಜಲು, ಪ್ರಧಾನ ಕಾರ್ಯದರ್ಶಿ ರಾಜ್ಯ ಸಮಿತಿ
ರಮೀಝ್ ಹುಸೇನ್, ಕಾರ್ಯದರ್ಶಿ ರಾಜ್ಯ ಸಮಿತಿ,
ಶರೀಫ್ ಅಬ್ಬಾಸ್ ವಳಾಲ್, ಸದಸ್ಯರು ರಾಜ್ಯ ಕಾರ್ಯಕಾರಿ ಸಮಿತಿ .
ದಾವೊದ್, ಸದಸ್ಯರು ರಾಜ್ಯ ಸಮಿತಿ.
ಸಿದೀಕ್ ಉಳ್ಳಾಲ್,ರಾಜ್ಯ ಸಮಿತಿ ಸದಸ್ಯ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!