ಮೀಂಜ-ಮಂಗಲ್ಪಾಡಿ ಪಬ್ಲಿಕ್ ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ

ಮೀಯಪದವು ಚಿಗುರುಪಾದೆಯಲ್ಲಿ ಕಾರ್ಯವೆಸಗುತ್ತಿರುವ “ಮೀಂಜ_ ಮಂಗಲ್ಪಾಡಿ ಪಬ್ಲಿಕ್ ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿ”ಯ ಮಹಾಸಭೆಯು ದಿನಾಂಕ 14 ರಂದು ಚಿಗುರುಪಾದೆ ಸಿ.ಸಿ. ಕಾಂಪ್ಲೆಕ್ಸ್ ನಲ್ಲಿ ಜರಗಿತು.

ಸೊಸೈಟಿ ಅಧ್ಯಕ್ಷ ಶ್ರೀ ಪ್ರಭಾಕರ ಶೆಟ್ಟಿ ಯವರ ಅಧ್ಯಕ್ಷತೆ ಯಲ್ಲಿ , ಮಂಜೇಶ್ವರ ವಿಭಾಗದ ಸಹಕಾರಿ ಸಹಾಯಕ ನಿಬಂಧಕ ಶ್ರೀ ರವೀಂದ್ರ ರವರು ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸೊಸೈಟಿ ಯ ಸದಸ್ಯರೂ, ಕರ್ನಾಟಕ ರಾಜ್ಯದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀ ಜಗದೀಶ್ ಶೆಟ್ಟಿ ಮಾಸ್ಟರ್, ಎಲಿಯಾಣ ಅವರಿಗೆ ಸಭೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.

ಎಸ್.ಎಸ್.ಎಲ್. ಸಿ. ವಿಭಾಗದ ಎಲ್ಲ ಸಬ್ಜೆಕ್ಟ್ ನಲ್ಲಿ ಏಪ್ಲಸ್ ಪಡೆದ ಸದಸ್ಯರ ಮಕ್ಕಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸೊಸೈಟಿ ಸದಸ್ಯರುಗಳಾದ ಶ್ರೀ ಬಾಲಕೃಷ್ಣ ಶೆಟ್ಟಿ, ಶ್ರೀ ಅಣ್ಣಪ್ಪ ಹೆಗ್ಡೆ, ಶ್ರೀ ಜನಾರ್ಧನ ಪೂಜಾರಿ, ಶ್ರೀಮತಿ ಸರಸ್ವತಿ, ಶ್ರೀ ಸಿ.ಬಾಬು ಸೊಸೈಟಿ ಅಭಿವೃದ್ಧಿಗೆ ಮಾರ್ಗದರ್ಶನ ನೀಡಿದರು. ಸೊಸೈಟಿ ಉಪಾಧ್ಯಕ್ಷ ಶ್ರೀ ರವೀಂದ್ರ ಶೆಟ್ಟಿ ಬೊಳ್ಳಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ನಿರ್ದೇಶಕರಾದ ಶ್ರೀ ರಾಮಚಂದ್ರ ಟಿ ಬಜೆಟ್ ಮಂಡಿಸಿ, ಕಾರ್ಯದರ್ಶಿ ಶ್ರೀ ಉದಯ ಸಿ.ಹೆಚ್. ವಾರ್ಷಿಕ ವರದಿ ಮಂಡಿಸಿದರು.ಸಿಬ್ಬಂದಿ ಶ್ರೀಮತಿ ನಿವೇದಿತ ರವರು ವಾರ್ಷಿಕ ಲೆಕ್ಕಪತ್ರ ವಾಚಿಸಿದರು. ಸೊಸೈಟಿ ನಿರ್ದೇಶಕ ರು ಗಳಾದ ಶ್ರೀ ಲೋಕೇಶ್ ಚಿನಾಲ, ಶ್ರೀ ಮೊಹಮ್ಮದ್ ಖಾಲಿದ್, ಶ್ರೀ ವಿಶ್ವನಾಥ, ಶ್ರೀ ಸೋಮಶೇಖರ್ ಉಪಸ್ಥಿತರಿದ್ದರು. ಆರಂಭದಲ್ಲಿ ಕಾರ್ಯದರ್ಶಿ ಶ್ರೀ ಉದಯ ಸಿ.ಹೆಚ್. ಸ್ವಾಗತಿಸಿ ಕೊನೆಯಲ್ಲಿ ನಿರ್ದೇಶಕಿ ಶ್ರೀಮತಿ ಚಂದ್ರಾವತಿ ಧನ್ಯವಾದವಿತ್ತರು.

SHARE
Loading spinner

Leave a Reply

Your email address will not be published. Required fields are marked *

error: Content is protected !!