ಆರ್ಥಿಕವಾಗಿ ಹಿಂದುಳಿದ ವರ್ಗದವರ ಸಮೀಕ್ಷೆಗೆ ಕರಾವಳಿಯ ಸಾರ್ವಜನಿಕರು ಸಂಪೂರ್ಣ ಸಹಕಾರವನ್ನು ನೀಡಬೇಕು- ಐವನ್ ಡಿ’ಸೋಜಾ

ಮಂಗಳೂರು: ಆರ್ಥಿಕವಾಗಿ ಹಿಂದುಳಿದ ವರ್ಗದವರ ಸಮೀಕ್ಷೆಯು ಸೆಪ್ಟೆಂಬರ್ ೨೨ ರಿಂದ ಅಕ್ಟೋಬರ್ ೭ ರ ತನಕ ರಾಜ್ಯದಲ್ಲಿ ನಡೆಯಲಿದ್ದು ಇದಕ್ಕೆ ಕರಾವಳಿಯ ಸಾರ್ವಜನಿಕರು ಸಂಪೂರ್ಣ ಸಹಕಾರವನ್ನು ನೀಡಬೇಕೆಂದು ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜಾ ಕರೆ ನೀಡಿದರು .

ಅವರು ಮನಪಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ರಾಜ್ಯದಲ್ಲಿ ಇನ್ನೇನೂ ಕೆಲವೇ ದಿನಗಳಲ್ಲಿ ಜಾತಿ ಗಣತಿಯು ನಡೆಯಲಿರುವುದು . ಸಮೀಕ್ಷೆಯಲ್ಲಿ ಸಾರ್ವಜನಿಕರಿಗಾಗಿ ಸುಮಾರು ೬೦ ಪ್ರಶ್ನಾವಳಿಯ ನಮೂನೆಗಳು ಬಿಡುಗಡೆ ಮಾಡಲಾಗಿದೆ.ಈ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡಬೇಕು . ಈ ಸಮೀಕ್ಷೆಯ ಪ್ರಧಾನ ಉದ್ದೇಶ ರಾಜ್ಯದ ಜನರ ಆರ್ಥಿಕ , ಸಾಮಾಜಿಕ ಪರಿಸ್ಥಿತಿಯನ್ನು ತಿಳಿದುಕೊಳ್ಳುವುದಾಗಿದೆ .

ಈ ಸಮೀಕ್ಷೆಯು ರಾಜ್ಯ ಸರಕಾರದ ನೂತನ ಯೋಜನೆಗಳಿಗೆ ಪುಷ್ಟಿ , ಬಜೆಟ್ ನಲ್ಲಿ ಯಾವ ಸಮುದಾಯಕ್ಕೆ ಎಷ್ಟು ಪ್ರಾತಿನಿಧ್ಯತೆಯನ್ನು ನೀಡಬೇಕೆಂಬ ತಿಳುವಳಿಕೆ ಮತ್ತು ಸರಕಾರದ ಅನುದಾನವನ್ನು ಸಮರ್ಪಕವಾಗಿ ಹಂಚಲು ಸಹಕಾರಿ ಆಗಲಿದೆ ಎಂದರು .

ಜೊತೆಗೆ ಈ ಗಣತಿಯು ತಲಾ ಆದಾಯದಲ್ಲಿ ದೇಶಕ್ಕೆ ಪ್ರಥಮ ಸ್ಥಾನದಲ್ಲಿರುವ ಕರ್ನಾಟಕ ರಾಜ್ಯದಲ್ಲಿ ೮೦ ಶೇಕಡಕ್ಕೂ ಅಧಿಕ ಜನರು ಬಿ ಪಿ ಎಲ್ ಕಾರ್ಡ್ ಹೊಂದಿರುವವರ ಆರ್ಥಿಕ ಸ್ಥಿತಿಯ ಸ್ಪಷ್ಟತೆಯು ಇದರಲ್ಲಿ ಸಿಗಲಿದೆ ಎಂದರು

ಸುದ್ದಿಗೋಷ್ಠಿಯಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸ್ಟ್ಯಾನಿ ಅಲ್ವಾರೆಸ್ , ಕ್ಯಾಥೋಲಿಕ್ ಸಭಾ ಕೇಂದ್ರ ಸಮಿತಿಯ ಅಧ್ಯಕ್ಷರಾದ ಸಂತೋಷ್ ಡಿ’ಸೋಜಾ , ಸತೀಶ್ ಬೆಂಗ್ರೆ , ಭಾಸ್ಕರ್ , ಚಂದ್ರಾಸ್ ಮುಂತಾದವರು ಉಪಸ್ಥಿತತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!